ಸಾರ್ವಕಾಲಿಕ ಅಂತರರಾಷ್ಟ್ರೀಯ ಗೋಲ್ ಸ್ಕೋರಿಂಗ್ ದಾಖಲೆ ಮುರಿದ ಕ್ರಿಸ್ಟಿಯಾನೊ ರೊನಾಲ್ಡೊ

Update: 2021-09-02 06:11 GMT

ಮ್ಯಾಡ್ರಿಡ್: ಕ್ರಿಸ್ಟಿಯಾನೊ ರೊನಾಲ್ಡೊ ಬುಧವಾರ ರಾತ್ರಿ ಫಾರೊದಲ್ಲಿ ನಡೆದ ರಿಪಬ್ಲಿಕ್ ಆಫ್ ಐರ್ಲೆಂಡ್ ವಿರುದ್ಧ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಪೋರ್ಚುಗಲ್  ಪರ 110ನೇ ಗೋಲು ಗಳಿಸುವುದರೊಂದಿಗೆ  ಸಾರ್ವಕಾಲಿಕ ಅಂತರರಾಷ್ಟ್ರೀಯ ಗೋಲು ಸ್ಕೋರಿಂಗ್ ದಾಖಲೆಯನ್ನು ಮುರಿದರು.

ರೊನಾ್ಲ್ಡೊ ಅವಳಿ ಗೋಲು ಸಾಹಸದಿಂದ ಪೋರ್ಚುಗಲ್ ತಂಡ ರಿಪಬ್ಲಿಕ್ ಆಫ್ ಐರ್ಲೆಂಡ್ ವಿರುದ್ಧ ವಿಶ್ವಕಪ್ ಅರ್ಹತಾ ಪಂದ್ಯವನ್ನು 2-1 ಅಂತರದಿಂದ ಗೆದ್ದುಕೊಂಡಿತು.

36 ವರ್ಷದ ರೊನಾಲ್ಡೊ 89 ನೇ ನಿಮಿಷದಲ್ಲಿ ಹೆಡರ್ ಮೂಲಕ ಗೋಲು ಗಳಿಸಿ ಸ್ಕೋರನ್ನು ಸಮಬಲ ಗೊಳಿಸಿದರು. ಬಳಿಕ ಇಂಜುರಿ ಟೈಮ್ ನಲ್ಲಿ ಮತ್ತೊಂದು ಗೋಲು ಗಳಿಸಿ ಪೋರ್ಚುಗಲ್ ಗೆ ರೋಚಕ ಗೆಲುವು ತಂದರು.

 ರೊನಾಲ್ಡೊ ಪೋರ್ಚುಗಲ್ ಪರ  180 ಪಂದ್ಯಗಳಲ್ಲಿ 111 ಗೋಲುಗಳನ್ನು ಗಳಿಸಿದರು. ಈ ಮೂಲಕ  ಇರಾನ್ ಪರವಾಗಿ 149 ಪಂದ್ಯಗಳಲ್ಲಿ 109 ಗೋಲುಗಳನ್ನು ಗಳಿಸಿದ್ದ ಅಲಿ ದಾಯಿ ಅವರ ದಾಖಲೆಯನ್ನು ಮುರಿದರು.

ರೊನಾಲ್ಡೊ ಅವರು  ಫ್ರಾನ್ಸ್ ವಿರುದ್ಧ ಪೋರ್ಚುಗಲ್‌ನ ಅಂತಿಮ ಯುರೋ 2020 ಗ್ರೂಪ್ ಪಂದ್ಯದಲ್ಲಿ ಎರಡು ಬಾರಿ  ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ಇರಾನಿನ ಅಲಿ  ಡೇಯಿ ದಾಖಲೆಯನ್ನು ಸರಿಗಟ್ಟಿದ್ದರು.

ಪೋರ್ಚುಗಲ್  ವಿಶ್ವಕಪ್ ಅರ್ಹತಾ ಸುತ್ತಿನಲ್ಲಿ ನಾಲ್ಕು ಪಂದ್ಯಗಳಿಂದ 10 ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಆದರೂ ಸೆರ್ಬಿಯಾ ಕೇವಲ ಮೂರು ಅಂಕಗಳಷ್ಟು ಹಿನ್ನಡೆಯಲ್ಲಿದೆ.

ಗುಂಪು ವಿಜೇತರು ಖತರ್‌ನಲ್ಲಿ ವಿಶ್ವಕಪ್ ಗೆ ಸ್ವಯಂಚಾಲಿತವಾಗಿ ಅರ್ಹತೆ ಪಡೆಯುತ್ತಾರೆ. ರನ್ನರ್ಸ್ ಅಪ್ ಪ್ಲೇ-ಆಫ್‌ಗೆ ಹೋಗುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News