ಅಫ್ಘಾನಿಸ್ತಾನವು ತಾಲಿಬಾನ್ ವಶವಾದ ನಂತರ ಬಾಂಗ್ಲಾದೇಶಕ್ಕೆ ಆಗಮಿಸುತ್ತಿರುವ ಅಂಡರ್-19 ಕ್ರಿಕೆಟ್ ತಂಡ

Update: 2021-09-04 16:24 GMT
Photo Courtesy: Afghanistan Cricket Board Twitter

ಢಾಕಾ, ಸೆ.4: ಅಫ್ಘಾನಿಸ್ತಾನದ ಅಂಡರ್ -19 ಕ್ರಿಕೆಟ್ ತಂಡವು ಸಣ್ಣ ಸರಣಿ ಆಡಲು ಶನಿವಾರ ಬಾಂಗ್ಲಾದೇಶಕ್ಕೆ ಆಗಮಿಸಲು ಆರಂಭಿಸಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಫ್ಘಾನಿಸ್ತಾನವು ತಾಲಿಬಾನ್ ವಶವಾದ  ನಂತರ ವಿದೇಶದಲ್ಲಿ ಆಡಿದ ಮೊದಲ ಅಫ್ಘಾನ್ ಕ್ರಿಕೆಟ್ ತಂಡ ಇದಾಗಿದೆ.

ಅಫ್ಘಾನ್ ಕಿರಿಯರ ತಂಡ ಸೆಪ್ಟೆಂಬರ್ 10 ರಿಂದ 25 ರ ನಡುವೆ ಸಿಲ್ಹೆಟ್ ಅಂತರ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶದ ಅಂಡರ್ -19 ತಂಡದ ವಿರುದ್ಧ ಐದು ಏಕದಿನ ಹಾಗೂ ನಾಲ್ಕು ದಿನಗಳ ಪಂದ್ಯವನ್ನು ಆಡಲಿದೆ.

"ಎಂಟು ಆಟಗಾರರ ಮೊದಲ ಗುಂಪು ಇಂದು ಢಾಕಾಗೆ ಆಗಮಿಸಿದೆ. ಉಳಿದ ಆಟಗಾರರು ಇತರ ಎರಡು ಗುಂಪುಗಳಲ್ಲಿ ಆಗಮಿಸಲಿದ್ದಾರೆ" ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ವಕ್ತಾರ ರಬೀದ್ ಇಮಾಮ್ ಹೇಳಿದರು.

ತಾಲಿಬಾನ್ ಆಗಸ್ಟ್ ಮಧ್ಯದಲ್ಲಿ ತಮ್ಮ ದೇಶದ ಹೆಚ್ಚಿನ ಭಾಗವನ್ನು ನಿಯಂತ್ರಣಕ್ಕೆ ಪಡೆದ ನಂತರ ಅಂಡರ್-19 ಕ್ರಿಕೆಟ್ ತಂಡವು ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ತೆರಳಿದ ಮೊದಲ ಅಫ್ಘಾನ್ ತಂಡ ಎನಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News