ನ್ಯೂಝಿಲ್ಯಾಂಡ್: 6 ತಿಂಗಳ ಬಳಿಕ ಮೊದಲ ಬಾರಿಗೆ ಕೊರೋನದಿಂದ ಸಾವು

Update: 2021-09-04 17:04 GMT

ವೆಲ್ಲಿಂಗ್ಟನ್, ಸೆ.5: ಕಳೆದ ಆರು ತಿಂಗಳುಗಳಲ್ಲಿ ನ್ಯೂಝಿಲ್ಯಾಂಡ್ ನಲ್ಲಿ ಶನಿವಾರ ಇದೇ ಮೊದಲ ಬಾರಿಗೆ ಕೋವಿಡ್ನಿಂದಾಗಿ ಸಾವು ಸಂಭವಿಸಿದೆ. ಆದಾಗ್ಯೂ ದೇಶದಲ್ಲಿ ಡೆಲ್ಟಾ ಪ್ರಭೇದದ ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ಬಂದಿರುವ ಲಕ್ಷಣಗಳು ಕಂಡುಬರುತ್ತಿರುವುದಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

 ಕೋವಿಡ್ ಸೋಂಕಿತ 90ರ ವಯೋವೃದ್ಧ ಮಹಿಳೆಯೊಬ್ಬರ ವೆಂಟಿಲೇಟರ್ ಅಥವಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದೆ ಆಕ್ಲಂಡ್ನ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
  
ಈ ವರ್ಷದ ಫೆಬ್ರವರಿ 16ರಂದು ನ್ಯೂಝಿಲ್ಯಾಂಡ್ ನಲ್ಲಿ ಕೋವಿಡ್19ನಿಂದ ಮೊದಲ ಸಾವು ಸಂಭವಿಸಿದ ಪ್ರಕರಣವ ವರದಿಯಾದ ಬಳಿಕ ಈ ಮಾರಣಾಂತಿಕ ಸೋಂಕಿಗೆ ಬಲಿಯಾದ 27 ವ್ಯಕ್ತಿಯಾಗಿದ್ದಾರೆ.

  ಆಕ್ಲೆಂಡ್‌ ನ ತನ್ನ ಮನೆಯಲ್ಲಿ ಕೊರೋನ ದೃಢಪಟ್ಟಂತಹ ವ್ಯಕ್ತಿಯೊಬ್ಬರ ಸಂಪರ್ಕಕ್ಕೆ ಬಂದ ಬಳಿಕ ಆಕೆಗೆ ಸೋಂಕು ತಗಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News