ಅಸೆಂಬ್ಲಿ ಕಟ್ಟಡದಲ್ಲಿ ನಮಾಝ್‌ ಗೆಂದು ಕೊಠಡಿ ನಿರ್ಮಾಣಕ್ಕೆ ಆದೇಶ: ದೇವಸ್ಥಾನ ಕಟ್ಟಿಸಿ ಎಂದ ಬಿಜೆಪಿಗರು !

Update: 2021-09-05 08:21 GMT

ಹೊಸದಿಲ್ಲಿ: ಜಾರ್ಖಂಡ್‌ ಸರಕಾರವು ತಮ್ಮ ನೂತನ ಅಸೆಂಬ್ಲಿ ಆವರಣದಲ್ಲಿ ಮುಸ್ಲಿಮರಿಗೆ ನಮಾಝ್‌ ಮಾಡಲು ಅನುಕೂಲವಾಗುವಂತೆ ಕೊಠಡಿಯೊಂದನ್ನು ಮೀಸಲಿಡಲು ಆದೇಶ ನೀಡಿದೆ. ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿಗರು. ಅಸೆಂಬ್ಲಿ ಆವರಣದಲ್ಲೇ ಹನುಮಾನ್‌ ದೇವಸ್ಥಾನ ನಿರ್ಮಿಸಬೇಕು ಎಂದು ಹೇಳಿದ್ದಾಗಿ ತಿಳಿದು ಬಂದಿದೆ.

ಗುರುವಾರ ಹೊರಡಿಸಿದ್ದ ಈ ಆದೇಶವನ್ನು ಶನಿವಾರ ಸಾರ್ವಜನಿಕರ ಗಮನಕ್ಕೆ ತರಲಾಯಿತು.ಕಾಂಗ್ರೆಸ್ ಈ ನಿರ್ಧಾರವನ್ನು ಸ್ವಾಗತಿಸಿದರೆ, ಹೇಮಂತ್ ಸೊರೆನ್ ನೇತೃತ್ವದ ಜಾರ್ಖಂಡ್ ಸರ್ಕಾರವು ಧಾರ್ಮಿಕ ಧ್ರುವೀಕರಣ ಮತ್ತು ತುಷ್ಟೀಕರಣದ ರಾಜಕೀಯವನ್ನು ಆಡುತ್ತಿದೆ ಎಂದು ಬಿಜೆಪಿ ಆರೋಪಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮ್ಮ ಪಕ್ಷ ಯಾವುದೇ ಧರ್ಮದ ವಿರುದ್ಧವಲ್ಲ ಎಂದು ಹೇಳಿದ ಬಿಜೆಪಿ ನಾಯಕ ಸಿಪಿ ಸಿಂಗ್‌, "ನಮ್ಮ ಸಂವಿಧಾನದ ಪ್ರಕಾರ, ಪ್ರತಿಯೊಬ್ಬರೂ ತಮ್ಮ ಆಯ್ಕೆಯ ನಂಬಿಕೆಯನ್ನು ಆಚರಿಸಲು ಮುಕ್ತರಾಗಿದ್ದಾರೆ ಆದರೆ, ಸಂಸತ್ತು ಮತ್ತು ವಿಧಾನ ಸಭೆಗಳನ್ನು ಪ್ರಜಾಪ್ರಭುತ್ವದ ದೇವಾಲಯವೆಂದು ಪರಿಗಣಿಸಲಾಗುತ್ತದೆ ಮತ್ತು ಯಾವುದೇ ನಿರ್ದಿಷ್ಟ ಧರ್ಮಕ್ಕಾಗಿ ಅಲ್ಲ. ರಾಜ್ಯ ವಿಧಾನಸಭಾ ಸ್ಪೀಕರ್ ನಮಾಝ್ ಗೆ ಜಾಗವನ್ನು ನೀಡಬಹುದಾದರೆ, ನಾವು ಹನುಮಾನ್ ದೇವಸ್ಥಾನವನ್ನು ಸ್ಥಾಪಿಸಲು ಸ್ಥಳವನ್ನು ಒದಗಿಸುವಂತೆ ಅವರನ್ನು ಒತ್ತಾಯಿಸುತ್ತೇವೆ." ಎಂದ ಅವರು ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News