4ನೇ ಟೆಸ್ಟ್: ಭಾರತ ವಿರುದ್ಧ ಕಠಿಣ ಗುರಿ ಪಡೆದ ಇಂಗ್ಲೆಂಡ್ ಉತ್ತಮ ಆರಂಭ
Update: 2021-09-05 23:52 IST
ಲಂಡನ್: ಭಾರತ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯ ಗೆಲ್ಲಲು 368 ರನ್ ಗುರಿ ಪಡೆದಿದ್ದ ಆತಿಥೇಯ ಇಂಗ್ಲೆಂಡ್ ರವಿವಾರ 4ನೇ ದಿನದಾಟದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 77 ರನ್ ಗಳಿಸಿ ಉತ್ತಮ ಆರಂಭ ಪಡೆದಿದೆ.
ಇನಿಂಗ್ಸ್ ಆರಂಭಿಸಿರುವ ರೋರಿ ಬರ್ನ್ಸ್ (31) ಹಾಗೂ ಹಸೀಬ್ ಹಮೀದ್(43) ಮೊದಲ ವಿಕೆಟ್ ಗೆ ಮುರಿಯದ ಜೊತೆಯಾಟದಲ್ಲಿ 77 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
5ನೇ ಹಾಗೂ ಕೊನೆಯದಿನವಾದ ಸೋಮವಾರ ಇಂಗ್ಲೆಂಡ್ ಗೆಲುವಿಗೆ ಇನ್ನೂ 291 ರನ್ ಗಳಿಸಬೇಕಾಗಿದೆ.
ಇದಕ್ಕೂ ಮೊದಲು ಭಾರತವು 2ನೇ ಇನಿಂಗ್ಸ್ ನಲ್ಲಿ 466 ರನ್ ಗಳಿಸಿ ಇಂಗ್ಲೆಂಡ್ ಗೆ ಕಠಿಣ ಗುರಿ ವಿಧಿಸಿತ್ತು.