ಮಹಾರಾಷ್ಟ್ರ ಮಾಜಿ ಗೃಹಸಚಿವ ವಿರುದ್ಧ ಲುಕೌಟ್ ನೋಟಿಸ್

Update: 2021-09-06 03:47 GMT

ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹಸಚಿವ ಅನಿಲ್ ದೇಶಮುಖ್ ವಿರುದ್ಧ ಕಾನೂನು ಜಾರಿ ನಿರ್ದೇಶನಾಲಯ ಲುಕೌಟ್ ನೋಟಿಸ್ ಹೊರಡಿಸಿದೆ.

ಲಂಚ ಆರೋಪದಲ್ಲಿ ಸಿಕ್ಕಿಹಾಕಿಕೊಂಡಿರುವ ಅನಿಲ್ ದೇಶಮುಖ್ ಕಳೆದ ಏಪ್ರಿಲ್‌ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಈ ರಾಜೀನಾಮೆಗೆ ಕಾರಣವಾಗಿದ್ದ 100 ಕೋಟಿ ರೂಪಾಯಿ ಲಂಚ ಆರೋಪದಲ್ಲಿ ದೇಶಮುಖ್ ವಿರುದ್ಧ ನೋಟಿಸ್ ಹೊರಡಿಸಲಾಗಿದೆ.ದೇಶಮುಖ್ ದೇಶದಿಂದ ಪಲಾಯನ ಮಾಡುವುದು ತಪ್ಪಿಸಲು ಈ ನೋಟಿಸ್ ನೀಡಲಾಗಿದೆ ಎಂದು ನಿರ್ದೇಶನಾಲಯದ ಮೂಲಗಳು ಹೇಳಿವೆ.

ಈ ಪ್ರಕರಣದಲ್ಲಿ ನಿರ್ದೇಶನಾಲಯದ ಬಲವಂತದ ಕ್ರಮಕ್ಕೆ ಮಧ್ಯಂತರ ಪರಿಹಾರ ಒದಗಿಸಲು ಸುಪ್ರೀಂಕೋರ್ಟ್ ಕಳೆದ ತಿಂಗಳು ನಿರಾಕರಿಸಿತ್ತು.

71 ವರ್ಷ ವಯಸ್ಸಿನ ರಾಜಕಾರಣಿ 100 ಕೋಟಿ ರೂ. ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಸಿಬಿಐ ಪ್ರಕರಣ ದಾಖಲಿಸಿದ ಬಳಿಕ, ನಿರ್ದೇಶನಾಲಯ ದೇಶಮುಖ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಈ ಆರೋಪ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News