ಗಿನಿಯಾ: ಅಧ್ಯಕ್ಷರನ್ನು ಸೆರೆಹಿಡಿದು ಸರಕಾರ ವಿಸರ್ಜಿಸಿದ ಸೇನಾ ಮುಖಂಡ

Update: 2021-09-06 15:25 GMT
photo: twitter.com/Smith_JeffreyT

ಕೊನಾಕ್ರಿ, ಸೆ.6: ಪಶ್ಚಿಮ ಆಫ್ರಿಕಾದ ದೇಶವಾದ ಗಿನಿಯಾದಲ್ಲಿ ದಂಗೆ ಎದ್ದ ಯೋಧರು ಅಧ್ಯಕ್ಷರ ನಿವಾಸದ ಬಳಿ ಭಾರೀ ಗುಂಡಿನ ಹೋರಾಟದ ಬಳಿಕ ಅಧ್ಯಕ್ಷ ಅಲ್ಫಾ ಕೊಂಡೆಯನ್ನು ಸೆರೆಯಲ್ಲಿರಿಸಿದ್ದು ಸರಕಾರವನ್ನು ವಿಸರ್ಜಿಸಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಟಿವಿ ವಾಹಿನಿಯಲ್ಲಿ ಘೋಷಿಸಲಾಗಿದೆ.

ದೇಶದ ಎಲ್ಲಾ ಗಡಿಗಳನ್ನೂ ಮುಚ್ಚಲಾಗಿದ್ದು ಸಂವಿಧಾನವನ್ನು ಅಸಿಂಧು ಎಂದು ಘೋಷಿಸಲಾಗಿದೆ. ಯೋಧರ ಕರ್ತವ್ಯ ದೇಶದ ರಕ್ಷಣೆಯಾಗಿದೆ. ಇನ್ನು ಮುಂದೆ ಒಬ್ಬ ವ್ಯಕ್ತಿಗೆ ರಾಜಕೀಯವನ್ನು ಒಪ್ಪಿಸಲಾಗದು. ಅದನ್ನು ದೇಶದ ಜನತೆಗೆ ಒಪ್ಪಿಸುತ್ತೇವೆ ’ ಎಂದು ಸೇನೆಯ ಕಮಾಂಡರ್ ಕರ್ನಲ್ ಮಮಾದಿ ಡೌಂಬೌಯಾ ಟಿವಿ ವಾಹಿನಿಯಲ್ಲಿ ದೇಶದ ಜನತೆಯನ್ನುದ್ದೇಶಿಸಿ ಹೇಳಿದ್ದಾರೆ. ಈ ಸಂದರ್ಭ ಅವರ ಪಕ್ಕ ಗಿನಿಯಾ ದೇಶದ ಧ್ವಜ ಮತ್ತು ಹಲವು ಸೈನಿಕರಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಎಲ್ಲಾ ಪ್ರಾದೇಶಿಕ ಕಮಾಂಡರ್ಗಳು ಕರ್ನಲ್ ಡೌಂಬೌಯಾ ಎದುರು ಹಾಜರಾಗಬೇಕು. ಇದಕ್ಕೆ ನಿರಾಕರಿಸುವವರನ್ನು ಸೇನಾ ಮುಖಂಡರ ವಿರುದ್ಧದ ಬಂಡುಗೋರರು ಎಂದು ಪರಿಗಣಿಸಲಾಗುವುದು ಎಂದು ಸೋಮವಾರ ಘೋಷಿಸಲಾಗಿದೆ.

ಕರ್ನಲ್ ಡೌಂಬಯಾಗೆ ನಿಷ್ಟರಾಗಿರುವ ಯೋಧರೆಷ್ಟಿದ್ದಾರೆ ಮತ್ತು ಅಧ್ಯಕ್ಷರಿಗೆ ನಿಷ್ಟರಾಗಿರುವ ಯೋಧರಿಂದ ಪ್ರತಿರೋಧ ಎದುರಾಗಿದೆಯೇ ಎಂಬ ಬಗ್ಗೆ ಮಾಹಿತಿಯಿಲ್ಲ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News