ಉತ್ತರಪ್ರದೇಶ: 20 ಬೀದಿನಾಯಿಗಳಿಗೆ ವಿಷಪ್ರಾಶನ, ದೂರು ದಾಖಲು

Update: 2021-09-06 17:25 GMT

ಸಾಂದರ್ಭಿಕ ಚಿತ್ರ

ಲಕ್ನೋ,ಸೆ.6: ನಾಯಿಗಳಿಂದಾಗಿ ಬೇಸತ್ತಿದ್ದ ಕೆಲವರು ಕನಿಷ್ಠ 20 ಬೀದಿನಾಯಿಗಳಿಗೆ ವಿಷಪ್ರಾಶನ ಮಾಡಿಸಿದ ಅತ್ಯಂತ ಹೇಯ ಘಟನೆ ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಬಸೌರಿಯಾ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಗ್ರಾಮದ ಮುಖ್ಯಸ್ಥ ಸುಖನಂದನ ಪ್ರಜಾಪತಿ ಅವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.


ಕೆಲವು ವ್ಯಕ್ತಿಗಳು ಶನಿವಾರ ಮತ್ತು ರವಿವಾರ ವಿಷ ಬೆರೆಸಿದ ಬ್ರೆಡ್ ಅನ್ನು ನಾಯಿಗಳಿಗೆ ತಿನ್ನಿಸಿದ್ದರು ಎಂದು ಸ್ಥಳೀಯ ಪೊಲೀಸರು ತಿಳಿಸಿದರು.

ಈವರೆಗೆ ಕನಿಷ್ಠ 20 ನಾಯಿಗಳು ಸಾವನ್ನಪ್ಪಿದ್ದು,ಅವುಗಳನ್ನು ದಫನ ಮಾಡಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಪ್ರಜಾಪತಿ ತಿಳಿಸಿದರು.
ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News