ಟ್ವೆಂಟಿ-20 ವಿಶ್ವಕಪ್: ಇಂಗ್ಲೆಂಡ್ ತಂಡದಿಂದ ಸ್ಟೋಕ್ಸ್ ಹೊರಗುಳಿಯುವ ಸಾಧ್ಯತೆ

Update: 2021-09-07 16:29 GMT
photo: instagram.com/stokesy

ಲಂಡನ್,ಸೆ.7: ಮುಂಬರುವ ಇಂಗ್ಲೆಂಡ್ ನ ಟ್ವೆಂಟಿ-20 ವಿಶ್ವಕಪ್ ಅಭಿಯಾನದಿಂದ ಬೆನ್ ಸ್ಟೋಕ್ಸ್ ಹೊರಗುಳಿಯುವ ಸಾಧ್ಯತೆಯಿದೆ. ಆಲ್ ರೌಂಡರ್ ಸ್ಟೋಕ್ಸ್ ಅವರ ವೈಯಕ್ತಿಕ ಯೋಗಕ್ಷೇಮ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯ ಕೋಚ್ ಕ್ರಿಸ್ ಸಿಲ್ವರ್ ವುಡ್ ಹೇಳಿದ್ದಾರೆ.

30ರ ಹರೆಯದ ಸ್ಟೋಕ್ಸ್ ಪ್ರಸ್ತುತ ಅನಿರ್ದಿಷ್ಟಾವಧಿಗೆ ಕ್ರಿಕೆಟ್ ನಿಂದ ದೂರ ಉಳಿದಿದ್ದಾರೆ. ಮಾನಸಿಕ ಆರೋಗ್ಯ ಹಾಗೂ ಬೆರಳು ಗಾಯದಿಂದ ಚೇತರಿಸಿಕೊಳ್ಳುವತ್ತ ಆದ್ಯತೆ ನೀಡಲು ಅವರು ಜುಲೈನಿಂದ ಕ್ರಿಕೆಟ್ ಮೈದಾನಕ್ಕೆ ಇಳಿದಿಲ್ಲ.

ಶುಕ್ರವಾರದಂದು ಐಸಿಸಿಗೆ ತಂಡದ ಪಟ್ಟಿ ಸಲ್ಲಿಸುವ ಅಗತ್ಯವಿದೆ. ಸ್ಟೋಕ್ಸ್ ಇಂಗ್ಲೆಂಡ್ ನ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕ್ಷೀಣ. ಇಂಗ್ಲೆಂಡ್ ಮೂವರು ಮೀಸಲು ಆಟಗಾರರನ್ನು ನೇಮಿಸಲು ಯೋಜಿಸಿದ್ದು ಈ ಪಟ್ಟಿಯಲ್ಲಿ ಸ್ಟೋಕ್ಸ್ ಸೇರುವ ಸಾಧ್ಯತೆಯಿಲ್ಲ.

ಈ ಬಾರಿಯ ವಿಶ್ವಕಪ್ ಟೂರ್ನಿಯು ಯುಎಇ ಹಾಗೂ ಓಮಾನ್ ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರ ತನಕ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News