ಇಂಡೋನೇಶ್ಯಾ: ಜೈಲಿನಲ್ಲಿ ಅಗ್ನಿ ಅನಾಹುತ: ಕನಿಷ್ಠ 41 ಕೈದಿಗಳು ಮೃತ್ಯು

Update: 2021-09-08 05:56 GMT
ಸಾಂದರ್ಭಿಕ ಚಿತ್ರ, ANI

ಜಕಾರ್ತ: ಇಂಡೋನೇಶ್ಯದ ಜೈಲಿನಲ್ಲಿ ಬುಧವಾರ ಬೆಳಗ್ಗಿನ ಜಾವ ಸಂಭವಿಸಿರುವ ಅಗ್ನಿ ಅನಾಹುತದಲ್ಲಿ ಕನಿಷ್ಠ 41 ಕೈದಿಗಳು ಮೃತಪಟ್ಟಿದ್ದು, 39 ಜನರು ಗಾಯಗೊಂಡಿದ್ದಾರೆ ಎಂದು ಕಾನೂನು ಹಾಗೂ ಮಾನವ ಹಕ್ಕುಗಳ ಸಚಿವಾಲಯದ ಜೈಲು ಇಲಾಖೆಯ ವಕ್ತಾರ ರಿಕಾ ಅಪ್ರಿಯಂತಿ ಹೇಳಿದ್ದಾರೆ.

ಇಂಡೋನೇಶ್ಯದ ಬಾಂಟೆನ್ ಪ್ರಾಂತ್ಯದಲ್ಲಿರುವ ಜೈಲಿನಲ್ಲಿ ಈ ದುರಂತ ಸಂಭವಿಸಿದೆ. ಕಾರಾಗೃಹದಲ್ಲಿ ಕೈದಿಗಳು ಕಿಕ್ಕಿರಿದು ತುಂಬಿದ್ದರು.

1,255 ಕೈದಿಗಳನ್ನು ಇಡುವಷ್ಟು ಸಾಮರ್ಥ್ಯವಿರುವ ತಂಗೇರಂಗ ಜೈಲಿನಲ್ಲಿ 2,000ಕ್ಕೂ ಹೆಚ್ಚು ಜನರಿದ್ದರು. ಬೆಂಕಿ ಸಂಭವಿಸಿದಾಗ ಬ್ಲಾಕ್ ಸಿನಲ್ಲಿ 122 ಅಪರಾಧಿಗಳಿದ್ದರು. ಬೆಂಕಿ ನಂದಿಸಲು ನೂರಾರು ಪೊಲೀಸರು ಹಾಗು ಸೈನಿಕರನ್ನು  ನಿಯೋಜಿಸಲಾಗಿದೆ ಎಂದು ಅಪ್ರಿಯಂತಿ ತಿಳಿಸಿದ್ದಾರೆ.

ಅಗ್ನಿಶಾಮಕ ದಳದವರು ಒಂದು ಬ್ಲಾಕ್‌ನೊಳಗೆ ಬೆಂಕಿ ನಂದಿಸಲು ಶ್ರಮಿಸುತ್ತಿದ್ದು, ಈ ಬ್ಲಾಕ್ ನಲ್ಲಿ ಮಾದಕದ್ರವ್ಯದ ಆರೋಪದ ಮೇಲೆ ಜೈಲುಪಾಲಾಗಿದ್ದ ಕೈದಿಗಳನ್ನು ಇರಿಸಲಾಗಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News