ಐಎಎಫ್‌ಗಾಗಿ ತುರ್ತು ಲ್ಯಾಂಡಿಂಗ್ ಸೌಲಭ್ಯವನ್ನು ಉದ್ಘಾಟಿಸಿದ ರಾಜನಾಥ್ ಸಿಂಗ್

Update: 2021-09-09 10:40 GMT

ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿ (ಎನ್ಎಚ್) 925 'ಎ' ಯ ಸಟ್ಟಾ-ಗಂಧವ್ ವಿಸ್ತಾರದಲ್ಲಿ ಭಾರತೀಯ ವಾಯುಪಡೆಗೆ (ಐಎಎಫ್) ತುರ್ತು ಲ್ಯಾಂಡಿಂಗ್ ಸೌಲಭ್ಯವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಕೇಂದ್ರ ರಸ್ತೆ ಸಾರಿಗೆ ಹಾಗೂ  ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಉದ್ಘಾಟಿಸಿದರು.

ಐಎಎಫ್‌ನ ಹರ್ಕ್ಯುಲಸ್ ಸಿ -130 ಜೆ ವಿಮಾನವು ಇಬ್ಬರು ಸಚಿವರು ಹಾಗೂ ಮುಖ್ಯ ರಕ್ಷಣಾ ಸಿಬ್ಬಂದಿ ಬಿಪಿನ್ ರಾವತ್ ಅವರನ್ನು ಹೊತ್ತೊಯ್ದು ಗುರುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಣಕು ತುರ್ತು ಲ್ಯಾಂಡಿಂಗ್ ನಡೆಸಿತು. ಎನ್‌ಎಚ್ -925 ಐಎಎಫ್ ವಿಮಾನಗಳ ತುರ್ತು ಲ್ಯಾಂಡಿಂಗ್‌ಗೆ ಬಳಸಲಾದ ಭಾರತದ ಮೊದಲ ರಾಷ್ಟ್ರೀಯ ಹೆದ್ದಾರಿಯಾಗಿದೆ.

ಇಬ್ಬರು ಸಚಿವರು ಗುರುವಾರ ಎನ್ಎಚ್-295 ನ ತುರ್ತು ಲ್ಯಾಂಡಿಂಗ್ ಸೌಲಭ್ಯದಲ್ಲಿ (ಇಎಲ್ ಎಫ್) ಬಹು ವಿಮಾನ ಕಾರ್ಯಾಚರಣೆಗಳಿಗೆ ಸಾಕ್ಷಿಯಾದರು. ಸುಖೋಯ್ -30 ಎಂಕೆಐ ಫೈಟರ್ ಜೆಟ್ ಇಬ್ಬರು ಮಂತ್ರಿಗಳ ಮುಂದೆ ಇಎಲ್‌ಎಫ್‌ನಲ್ಲಿ ಅಣಕು ತುರ್ತು ಲ್ಯಾಂಡಿಂಗ್ ನಡೆಸಿತು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್  ಇದೊಂದು 'ಮಹಾನ್ ಸಾಧನೆ' ಎಂದು  ಶ್ಲಾಘಿಸಿದರು ಹಾಗೂ  ಎನ್ ಎಚ್ ಎಐ 20 ಸ್ಥಳಗಳಲ್ಲಿ ತುರ್ತು ಲ್ಯಾಂಡಿಂಗ್ ಫೀಲ್ಡ್ ಗಳನ್ನು ಸಿದ್ಧಪಡಿಸುತ್ತಿದೆ ಹಾಗೂ ಇತರ ಹಲವು ಪ್ರದೇಶಗಳಲ್ಲಿ ಹೆಲಿಪ್ಯಾಡ್‌ಗಳನ್ನು ನಿರ್ಮಿಸುತ್ತಿದೆ ಎಂದು ಹೇಳಿದರು.

"ಈ ಎಮರ್ಜೆನ್ಸಿ  ಲ್ಯಾಂಡಿಂಗ್ ಫೀಲ್ಡ್ ಹಾಗೂ  ಮೂರು ಹೆಲಿಪ್ಯಾಡ್‌ಗಳು ಯುದ್ಧದ ಸಮಯದಲ್ಲಿ ಮಾತ್ರವಲ್ಲದೆ ಯಾವುದೇ ನೈಸರ್ಗಿಕ ವಿಕೋಪದ ಸಮಯದಲ್ಲಿ ರಕ್ಷಣಾ ಹಾಗೂ  ಪರಿಹಾರ ಕಾರ್ಯಾಚರಣೆಗಳನ್ನು ನಡೆಸಲು ಉಪಯುಕ್ತವಾಗುತ್ತವೆ" ಎಂದು ಅವರು ಹೇಳಿದರು.

ಸಿಂಗ್ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಐಎಎಫ್  ಗಾಗಿ ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ವಾಯು ಕ್ಷಿಪಣಿ (ಎಂಆರ್ ಎಸ್ ಎಎಂ)/ಬರಾಕ್ -8 ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಪರಿಚಯಿಸಲಿದ್ದಾರೆ.

ಎಮರ್ಜೆನ್ಸಿ ಲ್ಯಾಂಡಿಂಗ್ ಫೆಸಿಲಿಟಿ (ಇಎಲ್‌ಎಫ್) ರಾಷ್ಟ್ರೀಯ ಹೆದ್ದಾರಿಯ ಭಾಗವಾಗಿದ್ದು, ಮೊದಲ ಬಾರಿಗೆ ಭಾರತೀಯ ವಾಯುಪಡೆಯ ವಿಮಾನಗಳ ತುರ್ತು ಲ್ಯಾಂಡಿಂಗ್ ಗೆ ಬಳಸಲಾಗುವುದು.

ಸುಖೋಯ್ ಸು -30 ಎಂಕೆಐ ಯುದ್ಧ ವಿಮಾನ ಹಾಗೂ ಜಾಗ್ವಾರ್ ಜೆಟ್ ರಾಜಸ್ಥಾನದ ಜಲೋರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಲ್ಯಾಂಡ್ ಆಗಿದ್ದು, ಸಶಸ್ತ್ರ ಪಡೆಗಳ ಇಂತಹ ತುರ್ತು ಲ್ಯಾಂಡಿಂಗ್ ಗಳಿಗೆ ಬಳಸಲಾಗುವ ರಸ್ತೆಯ ವಿಸ್ತರಣೆಯನ್ನು ANI ಹಂಚಿಕೊಂಡಿರುವ ವೀಡಿಯೊ ತುಣುಕುಗಳು ತೋರಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News