ಸಾಮಾಜಿಕ ಅಸಮಾನತೆ ಪರಿಹರಿಸಬೇಕಾದ ಅಗತ್ಯತೆ ಇದೆ: ಏಮ್ಸ್ ವರಿಷ್ಠ
Update: 2021-09-09 23:50 IST
ಹೊಸದಿಲ್ಲಿ, ಸೆ. 9: ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ಕಂಡು ಬಂದಿರುವ ಆರೋಗ್ಯ ಕ್ಷೇತ್ರದ ಅಸಮಾನತೆ ಸೇರಿದಂತೆ ಸಾಮಾಜಿಕ ಅಸಮಾನತೆಯನ್ನು ಪರಿಹರಿಸಬೇಕಾದ ಅಗತ್ಯತೆ ಇದೆ ಎಂದು ಏಮ್ಸ್‌ನ ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಭಾರತ್ ಸೋಕಾ ಗಕ್ಕಿ (ಬಿಎಸ್‌ಜಿ) ಬುಧವಾರ ಆಯೋಜಿಸಿದ್ದ ಆನ್‌ಲೈನ್ ವಿಚಾರಣ ಸಂಕಿರಣದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.ಸಾಂಕ್ರಾಮಿಕ ರೋಗದ ಕಾಲದಲ್ಲಿ ಯಾರನ್ನೂ ಹಿಂದುಳಿಯಲು ಬಿಡದೆ ಸಂಘಟಿತರಾಗಿ ಮುಂದುವರಿಯುವುದು ಮುಖ್ಯವಾದುದು. ಕೋವಿಡ್ ಸಾಂಕ್ರಾಮಿಕ ರೋಗ ಬೆಳಕು ಚೆಲ್ಲಿದ ಆರೋಗ್ಯ ಕ್ಷೇತ್ರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಅಸಮಾನತೆಯನ್ನು ನಾವು ಪರಿಹರಿಸಬೇಕಾದ ಅಗತ್ಯತೆ ಇದೆ ಎಂದು ಅವರು ಹೇಳಿದರು. ‘‘ಡಯಲಾಗ್ ಇನ್ ಆ್ಯಕ್ಷನ್: ಎಂಪವರಿಂಗ್ ಹ್ಯೂಮ್ಯಾನಿಟಿ’’ ಕುರಿತ ನೂತನ ವಿಚಾರ ಸಂಕಿರಣದ ಸರಣಿಯನ್ನು ಬಿಎಸ್‌ಐ ಲೋಕಾರ್ಪಣೆಗೊಳಿಸಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.