ಗುಂಟೂರು: ಸಾಮೂಹಿಕ ಅತ್ಯಾಚಾರ: ಆರೋಪಿಗಳ ಬಂಧನ

Update: 2021-09-09 18:26 GMT

ಹೈದರಾಬಾದ್, ಸೆ. 4: ಗುಂಟೂರು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪಾಲದುಗ ಸಮೀಪದ ಕೋಲ್ಡ್ ಸ್ಟೋರೇಜ್‌ನ 8 ಮಂದಿ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.

ಎಲ್ಲ ಆರೋಪಿಗಳು ಒಡಿಶಾ ಹಾಗೂ ವಿಝಿಯಾನ್‌ಗ್ರಾಮದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಸತ್ತನಪಲ್ಲೆ ಮಂಡಲದ ದಂಪತಿ ಗುಂಟೂರು ನಗರದಲ್ಲಿ ವಿವಾಹ ಸಮಾರಂಭವೊಂದರಲ್ಲಿ ಪಾಲ್ಗೊಂಡು ಬೈಕ್‌ನಲ್ಲಿ ಹಿಂದಿರುಗುತ್ತಿದ್ದಾಗ ಮೆಡಿಕೊಂಡುರು ಅಡ್ಡ ರಸ್ತೆಯಲ್ಲಿ ಆರೋಪಿಗಳು ಅಡ್ಡಗಟ್ಟಿದ್ದರು. ಪತಿಯ ಮೇಲೆ ಹಲ್ಲೆ ನಡೆಸಿ ಮಹಿಳೆಯನ್ನು ಸಮೀಪದ ಹೊಲಕ್ಕೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಲ್ಲದೆ ದಂಪತಿಯ ಹಣ ಹಾಗೂ ಚಿನ್ನವನ್ನು ದೋಚಿದ್ದರು. ಅಂದೇ ರಾತ್ರಿ ಸತ್ತನಪಲ್ಲೆ ಪೊಲೀಸ್ ಠಾಣೆಯಲ್ಲಿ ದಂಪತಿ ದೂರು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News