×
Ad

ಆರೆಸ್ಸೆಸ್‌, ಬಿಜೆಪಿ ಜಮ್ಮು ಕಾಶ್ಮೀರದ ಸಂಯೋಜಿತ ಸಂಸ್ಕೃತಿಯನ್ನು ಒಡೆಯಲು ಪ್ರಯತ್ನಿಸುತ್ತಿದೆ: ರಾಹುಲ್‌ ಗಾಂಧಿ

Update: 2021-09-10 19:05 IST

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಂಯೋಜಿತ ಸಂಸ್ಕೃತಿಯನ್ನು ಒಡೆಯಲು ಆರೆಸ್ಸೆಸ್-ಬಿಜೆಪಿ ಒಗ್ಗೂಡಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಆರೋಪಿಸಿದ್ದಾರೆ.

"ನಿಮ್ಮೆಲ್ಲರ ನಡುವೆ ಪ್ರೀತಿ, ಸಹೋದರತ್ವ ಮತ್ತು ಸಮ್ಮಿಶ್ರ ಸಂಸ್ಕೃತಿಯ ಭಾವನೆ ಇದೆ. ಈ ಸಂಸ್ಕೃತಿಯನ್ನು ಮುರಿಯಲು ಆರೆಸ್ಸೆಸ್ ಮತ್ತು ಬಿಜೆಪಿ ಪ್ರಯತ್ನಿಸುತ್ತಿರುವುದಕ್ಕೆ ನನಗೆ ಬೇಸರವಾಗಿದೆ" ಎಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಗಾಂಧಿ ಹೇಳಿದರು. ಜಮ್ಮುವಿಗೆ ಅವರ ಎರಡು ದಿನಗಳ ಭೇಟಿ ನೀಡಿದ್ದು, ಎರಡನೇ ದಿನ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು.

"ಅವರು (ಆರೆಸ್ಸೆಸ್, ಬಿಜೆಪಿ) ಪ್ರೀತಿ ಮತ್ತು ಸಹೋದರತ್ವದ ಮೇಲೆ ದಾಳಿ ಮಾಡುತ್ತಾರೆ. ನೀವು ದುರ್ಬಲಗೊಂಡಿದ್ದೀರಿ ಮತ್ತು ಇದರ ಪರಿಣಾಮವಾಗಿ ಅವರು ನಿಮ್ಮ ರಾಜ್ಯತ್ವವನ್ನು ಕಸಿದುಕೊಂಡರು" ಎಂದು ಅವರು ಹೇಳಿದರು.

"ನಾನು ನಿನ್ನೆ ಮಾತಾ ವೈಷ್ಣೋ ದೇವಿ ದೇಗುಲಕ್ಕೆ ಹೋಗಿದ್ದೆ. ಅಲ್ಲಿ ಮಾತೆಯ (ಪಿಂಡಿ) ಮೂರು ಸಂಕೇತಗಳಿವೆ - ಮಾತಾ ದುರ್ಗಾ, ಮಾತಾ ಲಕ್ಷ್ಮಿ ಮತ್ತು ಮಾತಾ ಸರಸ್ವತಿ. ದುರ್ಗಾ ದೇವಿಯು ನಮ್ಮನ್ನು ರಕ್ಷಿಸುತ್ತಾಳೆ, ಲಕ್ಷ್ಮಿ ಶಕ್ತಿಯ ಸಂಕೇತ, ಮತ್ತು ಸರಸ್ವತಿ ಶಿಕ್ಷಣ ಮತ್ತು ಜ್ಞಾನದ ಸಂಕೇತ. ಈ ಮೂರು ಶಕ್ತಿಗಳು ನಿಮ್ಮ ಮನೆ ಮತ್ತು ದೇಶದಲ್ಲಿ ಇದ್ದಾಗ, ಮನೆ ಮತ್ತು ದೇಶವು ಪ್ರಗತಿಯನ್ನು ಸಾಧಿಸುತ್ತದೆ" ಎಂದು ಅವರು ಹೇಳಿದರು.

ಜೊತೆಗೆ, ಬಿಜೆಪಿ ಸರ್ಕಾರದ ನೀತಿಗಳು ನೋಟು ರದ್ದತಿ ಮತ್ತು ಜಿಎಸ್‌ಟಿ ಅವರ ಅಧಿಕಾರವನ್ನು ದುರ್ಬಲಗೊಳಿಸಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News