ಗಾಝಾ ಪಟ್ಟಿಯಲ್ಲಿ ಸತತ 3ನೇ ದಿನ ಇಸ್ರೇಲ್ ವಾಯುದಾಳಿ

Update: 2021-09-13 16:59 GMT
photo: twitter.com/PalestineCultu1

ಜೆರುಸಲೇಂ, ಸೆ.13: ತನ್ನ ಪ್ರದೇಶದ ಮೇಲೆ ಪೆಲೆಸ್ತೀನ್ ನಡೆಸಿದ ರಾಕೆಟ್ ದಾಳಿಗೆ ಪ್ರತಿಯಾಗಿ ಗಾಝಾ ಪಟ್ಟಿಯ ಮೇಲೆ ಸೋಮವಾರ ವಾಯುದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಹಮಾಸ್ ಸಂಘಟನೆಯನ್ನು ಗುರಿಯಾಗಿಸಿ ಇಸ್ರೇಲ್ ಸತತ 3ನೇ ದಿನ ನಡೆಸಿದ ವಾಯುದಾಳಿ ಇದಾಗಿದ್ದು ಹಮಾಸ್ನ ನೆಲೆಗಳನ್ನು ಗುರಿಯಾಗಿಸಿ ವಾಯುದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ.

ಸೋಮವಾರ 6 ಫೆಲೆಸ್ತೀನ್ ಕೈದಿಗಳು ಬಿಗಿಭದ್ರತೆಯ ಇಸ್ರೇಲ್ ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾದಂದಿನಿಂದ ಇಸ್ರೇಲ್ - ಫೆಲೆಸ್ತೀನ್ ಮಧ್ಯೆ ಉದ್ವಿಗ್ ನತೆ ನೆಲೆಸಿದೆ. ಇವರಲ್ಲಿ 4 ಕೈದಿಗಳನ್ನು ಮತ್ತೆ ಬಂಧಿಸಿದ್ದು ಉಳಿದ ಇಬ್ಬರಿಗಾಗಿ ಗಾಝಾ ಪಟ್ಟಿಯಲ್ಲಿರುವ ಫೆಲೆಸ್ತೀನ್ ಪ್ರಜೆಗಳ ಮನೆಯಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಈ ಮಧ್ಯೆ, ಇಸ್ರೇಲ್-ಹಮಾಸ್ ಮಧ್ಯೆ ಈಜಿಪ್ಟ್ ಮಧ್ಯಸ್ಥಿಕೆಯಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಗೆ ತೊಡಕು ಎದುರಾಗಿದೆ. ಗಾಝಾ ಪಟ್ಟಿಯಲ್ಲಿ ತುರ್ತು ಅಗತ್ಯವಿರುವ ಕುಟುಂಬಗಳಿಗೆ ಖತರ್ ನೀಡುತ್ತಿರುವ ನೆರವನ್ನು ಮುಂದುವರಿಸುವ ವಿಷಯದಲ್ಲಿ ಭಿನ್ನಮತ ಮೂಡಿದೆ. ಈ ಆರ್ಥಿಕ ನೆರವನ್ನು ಹಮಾಸ್ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯಿದೆ ಎಂದು ಇಸ್ರೇಲ್ ಆಕ್ಷೇಪಿಸಿದೆ. ಅಂತರ್ ರಾಷ್ಟ್ರೀಯ ಮಾನ್ಯತೆ ಪಡೆದ ಫೆಲೆಸ್ತೀನಿಯನ್ ಅಥಾರಿಟಿ ಸೇನೆಯನ್ನು ಗಾಝಾ ಪಟ್ಟಿಯಿಂದ 2007ರಲ್ಲಿ ಹೊರದಬ್ಬಿದ್ದ ಹಮಾಸ್ ಸಂಘಟನೆ ಅಲ್ಲಿನ ಆಡಳಿತವನ್ನು ನಿಯಂತ್ರಣಕ್ಕೆ ಪಡೆದಿದೆ. ಅಂದಿನಿಂದ ಇಸ್ರೇಲ್-ಹಮಾಸ್ ಮಧ್ಯೆ 4 ಯುದ್ಧಗಳು ಹಾಗೂ ಹಲವು ಸಣ್ಣಪುಟ್ಟ ಸಂಘರ್ಷಗಳು ನಡೆದಿವೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News