ಕೇಂದ್ರ ಸರಕಾರ ರಾಷ್ಟ್ರವಿರೋಧಿಯೇ?: ಆರೆಸ್ಸೆಸ್‌ಗೆ ಆರ್.ಬಿ.ಐ. ಮಾಜಿ ಗವರ್ನರ್ ರಘುರಾಮ್ ರಾಜನ್ ತರಾಟೆ

Update: 2021-09-15 05:20 GMT
ಆರ್.ಬಿ.ಐ. ಮಾಜಿ ಗವರ್ನರ್ ರಘುರಾಮ್ ರಾಜನ್ (Photo soucre: PTI)

ಹೊಸದಿಲ್ಲಿ, ಸೆ.15: "ಕೋವಿಡ್-19 ಸಾಂಕ್ರಾಮಿಕದ ವಿರುದ್ಧದ ಲಸಿಕೆ ನೀಡಿಕೆ ವಿಚಾರದಲ್ಲಿ ಆರಂಭಿಕ ಹಂತದ ಕಳಪೆ ಸಾಧನೆಗಾಗಿ ಕೇಂದ್ರ ಸರ್ಕಾರವನ್ನು ನೀವು ರಾಷ್ಟ್ರವಿರೋಧಿ ಎಂದು ಪರಿಗಣಿಸುತ್ತೀರಾ" ಎಂದು ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಡಾ.ರಘುರಾಮ ರಾಜನ್ ಪ್ರಶ್ನಿಸಿದ್ದಾರೆ.

ತೆರಿಗೆ ಸಲ್ಲಿಕೆ ವೆಬ್‌ಸೈಟ್‌ನ ಕೆಲ ಸಮಸ್ಯೆಗಳನ್ನು ನಿವಾರಿಸುವಲ್ಲಿ ಇನ್ಫೋಸಿಸ್ ವಿಫಲವಾದ ಹಿನ್ನೆಲೆಯಲ್ಲಿ ಆರೆಸ್ಸೆಸ್ ಅಂಗಸಂಸ್ಥೆಯ ನಿಯತಕಾಲಿಕ 'ಪಾಂಚಜನ್ಯ'  ಇನ್ಫೋಸಿಸ್ ಸಂಸ್ಥೆಯನ್ನು ಟೀಕಿಸಿದ ಬಗೆಗೆ ಪ್ರತಿಕ್ರಿಯಿಸಿದ ರಾಜನ್ ಈ ಪ್ರಶ್ನೆ ಮುಂದಿಟ್ಟಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಖಾಸಗಿ ವಲಯದ ಹಲವು ಸಂಸ್ಥೆಗಳು ಸರ್ಕಾರಕ್ಕೆ ನಿಕಟವಾಗಿರುವ ವ್ಯಕ್ತಿ ಅಥವಾ ಸಂಸ್ಥೆಗಳಿಂದ ಟೀಕೆಗೆ ಒಳಗಾಗಿದ್ದು, ಇನ್ಫೋಸಿಸ್ ಇತ್ತೀಚಿನ ನಿದರ್ಶನವಾಗಿದೆ.

"ಇದು ಸಂಪೂರ್ಣ ಅನುತ್ಪಾದಕ ಎನ್ನುವ ಭಾವನೆ ತಂದಿದೆ. ಆರಂಭದಲ್ಲಿ ಲಸಿಕೆ ನೀಡಿಕೆಯಲ್ಲಿ ಉತ್ತಮ ಸಾಧನೆ ಮಾಡದ ಸರ್ಕಾರವನ್ನು ಕೂಡಾ ನೀವು ರಾಷ್ಟ್ರ ವಿರೋಧಿ ಎಂದು ಪರಿಗಣಿಸುತ್ತೀರಾ? ಇದು ಪ್ರಮಾದ ಎಂದು ನೀವು ಹೇಳುತ್ತೀರಿ. ಸಹಜವಾಗಿಯೇ ಜನ ತಪ್ಪುಗಳನ್ನು ಮಾಡುತ್ತಾರೆ" ಎಂದು ಜಿಎಸ್‌ಟಿ ವ್ಯವಸ್ಥೆಯನ್ನು ಯರ್ರಾಬಿರ್ರಿಯಾಗಿ ಆರಂಭಿಸಿದ್ದನ್ನು ಉಲ್ಲೇಖಿಸಿ ರಾಜನ್ ಹೇಳಿದ್ದಾರೆ.

"ಜಿಎಸ್‌ಟಿ ಆರಂಭಿಸಿರುವುದ ವಿಧಾನ ಅದ್ಭುತ ಎಂದು ನನಗನಿಸುವುದಿಲ್ಲ. ಇದನ್ನು ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು.. ಆದರೆ ಈ ತಪ್ಪುಗಳಿಂದ ಕಲಿಯಿರಿ; ಇದಕ್ಕೆ ನಿಮ್ಮ ಪೂರ್ವಾಗ್ರಹದ ಜತೆ ಸಂಪರ್ಕ ಕಲ್ಪಿಸಬೇಡಿ" ಎಂದು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನಲ್ಲಿ ಡಾ.ರಘುರಾಮ ರಾಜನ್ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News