ಟೈಮ್ ನಿಯತಕಾಲಿಕದ 2021 ರ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ,ಅದಾರ್ ಪೂನಾವಾಲಾ

Update: 2021-09-15 15:33 GMT

ಹೊಸದಿಲ್ಲಿ:ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಭಾರತದ ಸೀರಮ್ ಇನ್ಸ್ಟಿಟ್ಯೂಟ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅದಾರ್  ಪೂನಾವಾಲಾ, ಟೈಮ್ ನಿಯತಕಾಲಿಕದ '2021 ರ 100 ಪ್ರಭಾವಿ ವ್ಯಕ್ತಿಗಳ' ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತೀಯರಾಗಿದ್ದಾರೆ.

ಟೈಮ್ ನಿಯತಕಾಲಿಕ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು 6 ಪ್ರಮುಖ ವರ್ಗಗಳಾಗಿ ವಿಂಗಡಿಸಲಾಗಿದೆ. ಪ್ರವರ್ತಕ, ಕಲಾವಿದ, ನಾಯಕ, ಐಕಾನ್, ಟೈಟಾನ್ ಹಾಗೂ  ಇನ್ನೋವೇಟರ್. ಪ್ರತಿಯೊಂದು ವರ್ಗಗಳು ಪ್ರಪಂಚದಾದ್ಯಂತದ ವ್ಯಕ್ತಿಗಳ ಪಟ್ಟಿಯನ್ನು ಹೊಂದಿದೆ.

ಟೈಮ್ ನಿಯತಕಾಲಿಕದ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಅತ್ಯಂತ ಪ್ರಭಾವಿ ಹಾಗೂ ನಂಬಲರ್ಹವಾದ ಪಟ್ಟಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಪತ್ರಿಕೆಯ ಸಂಪಾದಕರು ಅಸಾಧಾರಣ ಕೆಲಸಕ್ಕಾಗಿ ಪ್ರತಿ ವ್ಯಕ್ತಿಯನ್ನು  ಆಯ್ಕೆ ಮಾಡುತ್ತಾರೆ ಹಾಗೂ  ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದನ್ನು ಆಯಾ ವ್ಯಕ್ತಿತ್ವಕ್ಕೆ ಗೌರವವೆಂದು ಪರಿಗಣಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News