ಕಂಪ್ಯೂಟರ್ ಚಿಪ್ ಗಳಲ್ಲಿ ಸ್ವಾವಲಂಬನೆಯ ಉದ್ದೇಶ: ನೂತನ ಕಾಯ್ದೆ ರೂಪಿಸಲು ಯುರೋಪಿಯನ್‌ ಯೂನಿಯನ್ ಯೋಜನೆ‌

Update: 2021-09-15 17:53 GMT

ಬ್ರಸೆಲ್ಸ್, ಸೆ.15: ಕಂಪ್ಯೂಟರ್ ಚಿಪ್ಗಳ ಸೆಮಿಕಂಡಕ್ಟರ್(ಅರೆವಾಹಕ) ವ್ಯವಸ್ಥೆಯಲ್ಲಿ ಸ್ವಸಂಪೂರ್ಣತೆ ಸಾಧಿಸುವ ಉದ್ದೇಶದ ನೂತನ ‘ಚಿಪ್ಸ್ ಕಾಯ್ದೆ’ಯನ್ನು ಜಾರಿಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಯುರೋಪಿಯನ್ ಯೂನಿಯನ್(ಇಯು) ಹೇಳಿದೆ.

 ಜಾಗತಿಕವಾಗಿ ಸೆಮಿಕಂಡಕ್ಟರ್ಗಳ ತೀವ್ರ ಕೊರತೆ ಇರುವುದರಿಂದ ಈಗ ಏಶ್ಯಾ ಮತ್ತು ಅಮೆರಿಕದ ಪೂರೈಕೆದಾರರನ್ನು ಅವಲಂಬಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ, ಯುರೋಪಿಯನ್ ಚಿಪ್ಗಳ ಉತ್ಪಾದನೆ ಸಹಿತ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ ಎಂದು ಯುರೋಪಿಯನ್ ಕಮಿಷನ್ನ ಅಧ್ಯಕ್ಷ ಉರ್ಸುಲಾ ವಾನ್ಡರ್ ಬುಧವಾರ ಯುರೋಪಿಯನ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ.

ಡಿಜಿಟಲ್ ಎಂಬುದು ನಿರ್ಮಿಸು ಅಥವಾ ಮುರಿ ಎಂಬ ವಿಷಯವಾಗಿದೆ. ನಾವೀಗ ಹೊಸದೊಂದು ಚಿಪ್ ಕಾಯ್ದೆ ರೂಪಿಸಲಿದ್ದು ಈ ಮೂಲಕ ನಮಗೆ ಪೂರೈಕೆಯ ಕೊರತೆಯಾಗದಂತೆ ಮತ್ತು ನಮ್ಮ ಅತ್ಯಾಧುನಿಕ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ರೂಪಿಸಲು ಪ್ರಯತ್ನಿಸಲಿದ್ದೇವೆ ಎಂದವರು ಹೇಳಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News