2022ರ ಗಣರಾಜ್ಯೋತ್ಸವಕ್ಕೆ ಮುನ್ನ ಮರು ಅಭಿವೃದ್ಧಿಗೊಂಡ ಸೆಂಟ್ರಲ್ ವಿಸ್ತಾ ಅವೆನ್ಯೂ ಸಿದ್ಧ: ಕೇಂದ್ರ

Update: 2021-09-16 18:23 GMT

ಹೊಸದಿಲ್ಲಿ, ಸೆ. 16: ದಿಲ್ಲಿಯ ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ವರೆಗೆ ಹಬ್ಬಿರುವ ಸೆಂಟ್ರಲ್ ವಿಸ್ತಾ ಅವೆನ್ಯೂ ಮರು ಅಭಿವೃದ್ಧಿ ಕಾಮಗಾರಿ ಎರಡೂವರೆ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ಹೇಳಿದ್ದಾರೆ.

2022ರಲ್ಲಿ ಗಣರಾಜ್ಯೋತ್ಸವ ದಿನಕ್ಕಿಂತ ಮುನ್ನ ಸೆಂಟ್ರಲ್ ವಿಸ್ಟಾದ ಸೆಂಟ್ರಲ್ ಅವೆನ್ಯೂ ಯೋಜನೆ ಸಿದ್ಧವಾಗಲಿದೆ ಎಂದು ಕೇಂದ್ರ ಗೃಹ ಹಾಗೂ ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ಮುಂದಿನ ವರ್ಷ ಚಳಿಗಾಲದ ಅಧಿವೇಶನ ನೂತನ ಸಂಸತ್ ಕಟ್ಟಡದಲ್ಲಿ ನಡೆಯಲಿದೆ ಎಂದು ಪುರಿ ಅವರು ಪ್ರತಿಪಾದಿಸಿದ್ದಾರೆ.

ರಕ್ಷಣಾ ಸಚಿವಾಲಯ ಹಾಗೂ ಶಶಸ್ತ್ರ ಪಡೆಯ 7,000ಕ್ಕೂ ಅಧಿಕ ಉದ್ಯೋಗಿಗಳಿಗೆ ದಿಲ್ಲಿಯ ಕಸ್ತೂರ್ಬಾ ಗಾಂಧಿ ಮಾರ್ಗ್ ಹಾಗೂ ಆಫ್ರಿಕಾ ಅವೆನ್ಯೂನಲ್ಲಿ ಎರಡು ನೂತನ ಬಹು ಮಹಡಿಯ ಕಚೇರಿ ಸಂಕೀರ್ಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಎರಡು ಕಟ್ಟಡಗಳನ್ನು ಉದ್ಘಾಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News