ಶಾಂಘೈ ಸಹಕಾರ ಸಂಘಟನೆ ತಾಲಿಬಾನ್ ಮೇಲೆ ಪ್ರಭಾವ ಬೀರಬೇಕು: ಪುಟಿನ್

Update: 2021-09-17 17:02 GMT

ಮಾಸ್ಕೊ, ಸೆ.17: ಭಯೋತ್ಪಾದನೆ ಮತ್ತು ಮಾದಕ ವಸ್ತುಗಳ ಕಳ್ಳಸಾಗಾಣಿಕೆಯನ್ನು ಪ್ರತಿಬಂಧಿಸುವ ತನ್ನ ವಾಗ್ದಾನವನ್ನು ತಾಲಿಬಾನ್ ಈಡೇರಿಸುವುದನ್ನು ಖಾತರಿಪಡಿಸಲು ರಶ್ಯಾ-ಚೀನಾ ನೇತೃತ್ವದ ಭದ್ರತಾ ಒಕ್ಕೂಟ ಶಾಂಘೈ ಸಹಕಾರ ಸಂಘಟನೆ ಮುಂದೆ ಬರಬೇಕು ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುಕ್ರವಾರ ಹೇಳಿದ್ದಾರೆ.

ತಜಿಕಿಸ್ತಾನದ ದುಷಾಂಬೆಯಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ(ಎಸ್ಸಿಒ) ಯ ಶೃಂಗಸಭೆಯನ್ನುದ್ದೇಶಿಸಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಪುಟಿನ್, ಅಫ್ಘಾನಿಸ್ತಾನದಲ್ಲಿ ಜನಜೀವನ ಮತ್ತು ಭದ್ರತಾ ಪರಿಸ್ಥಿತಿಯನ್ನು ಸಹಜಸ್ಥಿತಿಗೆ ತರುವುದಾಗಿ ಅಫ್ಘಾನ್ನ ನೂತನ ಆಡಳಿತ ನೀಡಿದ್ದ ಭರವಸೆಯನ್ನು ಈಡೇರಿಸಲು ಎಸ್ಸಿಒ ಪ್ರೋತ್ಸಾಹದ ಅಗತ್ಯವಿದೆ. ಅಫ್ಘಾನ್ನ ತಾಲಿಬಾನ್ ಸರಕಾರದೊಂದಿಗೆ ರಶ್ಯಾ ಕಾರ್ಯನಿರ್ವಹಿಸುವ ಅಗತ್ಯವಿದೆ. ಅಫ್ಘಾನಿಸ್ತಾನದ ಕುರಿತು ವಿಶ್ವಸಂಸ್ಥೆ ನಡೆಸಿದ ಅಧಿವೇಶನವನ್ನು ರಶ್ಯಾ   ೆಂಬಲಿಸಿತ್ತು ಎಂದು ಹೇಳಿದರು.

ಅಫ್ಘಾನ್ನ ನೂತನ ಸರಕಾರಕ್ಕೆ ಮಾನ್ಯತೆ ನೀಡುವ ಬಗ್ಗೆ ತನಗೆ ಆತುರವೇವಿಲ್ಲ ಎಂದು ಕಳೆದ ವಾರ ರಶ್ಯ ಹೇಳಿತ್ತು. ಈ ವಾರ ರಶ್ಯ ಮತ್ತು ಚೀನಾದ ಮಿತ್ರರಾಷ್ಟ್ರಗಳು ಅಫ್ಘಾನ್ನ ಬಗ್ಗೆ ಸರಣಿ ಸಭೆ ನಡೆಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News