×
Ad

ಪೋಷಕರು, ಇತರರು ತಮ್ಮ ಹೆಸರಿನಲ್ಲಿ ಸಭೆಗಳನ್ನು ನಡೆಸದಂತೆ ತಡೆಯಲು ಮೊಕದ್ದಮೆ ಹೂಡಿದ ತಮಿಳು ನಟ ವಿಜಯ್

Update: 2021-09-19 15:16 IST

ಹೆತ್ತವರು ಸೇರಿದಂತೆ ಇತರರು ತಮ್ಮ ಹೆಸರಿನಲ್ಲಿ ಸಭೆಗಳನ್ನು ನಡೆಸದಂತೆ ತಡೆಯಲು ಮೊಕದ್ದಮೆ ಹೂಡಿದ ನಟ ವಿಜಯ್

ಚೆನ್ನೈ: ತನ್ನ ಹೆಸರನ್ನು ಬಳಸಿಕೊಂಡು ಯಾವುದೇ ಸಭೆಗಳು ಅಥವಾ ಚಟುವಟಿಕೆಗಳನ್ನು ನಡೆಸದಂತೆ ತಡೆಯಬೇಕು ಎಂದು ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್‌ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟು 11 ಮಂದಿಯನ್ನು ನಿರ್ಬಂಧಿಸುವಂತೆ ಕೋರಿ ನಗರದ ನ್ಯಾಯಾಲಯದಲ್ಲಿ ಅವರು ಮೊಕದ್ದಮೆ ಹೂಡಿದ್ದಾರೆ.

ತನ್ನ ಹೆಸರಿನಲ್ಲಿ ಯಾವುದೇ ಸಭೆ ಮತ್ತು ಚಟುವಟಿಕೆಗಳನ್ನು ನಡೆಸುವುದನ್ನು ತಡೆಯಬೇಕು. ಸಂಘದ ಪತ್ರವು ಅನೂರ್ಜಿತವೆಂದು ಘೋಷಿಸಬೇಕು. ತಮ್ಮ ಪೋಷಕರು ಸೇರಿದಂತೆ 11 ಪ್ರತಿವಾದಿಗಳ ವಿರುದ್ಧ ಮಧ್ಯಂತರ ತಡೆ ನೀಡಬೇಕೆಂದು ಅವರು ಕೋರಿದ್ದಾರೆ. ಅವರ ಅಭಿಮಾನಿ ಬಳಗದ ಪದಾಧಿಕಾರಿಗಳನ್ನು ಕೂಡ ಪ್ರತಿವಾದಿಗಳಾಗಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದಾಗಿ thehindu ವರದಿ ಮಾಡಿದೆ.

ಈ ಪ್ರಕರಣವನ್ನು ಸೆಪ್ಟೆಂಬರ್ 27 ರಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News