ಮಳೆಯ ಆರ್ಭಟ: ಕೋಲ್ಕತಾ ಜಲಾವೃತ ‌

Update: 2021-09-20 17:16 GMT

ಕೋಲ್ಕತಾ,ಸೆ.20: ಪಶ್ಚಿಮಬಂಗಾಳದ ರಾಜಧಾನಿ ಕೋಲ್ಕತಾ ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಸೋಮವಾರ ಭಾರೀ ಮಳೆಯಾಗಿದ್ದು, ನಗರದ ವಿಮಾನನಿಲ್ದಾಣ ಸಂಪೂರ್ಣ ಜಲಾವೃತಗೊಂಡಿತು ಹಾಗೂ ರೈಲು ಸಂಚಾರ ವಿಳಂಬಗೊಂಡಿತು.

  ‌
ನಗರದ ವಿವಿಧೆಡೆ ರಸ್ತೆಗಳಲ್ಲಿ ನೀರು ತುಂಬಿಕೊಂಡ ಪರಿಣಾಮವಾಗಿ ವಾಹನ ಸವಾರರು ತೊಂದರೆಗೀಡಾದರು. ಕೋಲ್ಕತಾದ ತಗ್ಗುಪ್ರದೇಶದವಾ ಲೇಕ್ಗಾರ್ಡನ್ ಸೇರಿದಂತೆ ಅನೇಕ ಪ್ರದೇಶಗಳು ಜಲಾವೃತಗೊಂಡಿರುವುದಾಗಿ ಮೂಲಗಳು ತಿಳಿಸಿವೆ.
   
ಸೀಲ್ಡಾ ರೈಲು ನಿಲ್ದಾಣ ಸಮೀಪದ ಹೌರಾ-ಟಿಕಿಯಾಪುರದ ರೈಲು ಹಳಿಗಳಲ್ಲಿ ನೆರೆನೀರಿನಲ್ಲಿ ಮುಳುಗಿದ್ದರಿಂದ ರೈಲುಗಳ ಸಂಚಾರ ಅಸ್ತವ್ಯಸ್ತಗೊಂಡಿತು ಬಂಗಾಳಕೊಲ್ಲಿಯ ವಾಯವ್ಯದಿಂದ ರಾಜ್ಯದ ಗಂಗಾನದಿ ತಪ್ಪಲು ಪ್ರದೇಶಗಳಿಗೆ ಚಂಡಮಾರುತ ಬೀಸುತ್ತಿರುವುದರಿಂದ ಭಾರೀ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಂಗಳವಾರದವರೆಗೆ ಪಶ್ಚಿಮಬಂಗಾಳದ ದಕ್ಷಿಣ ಭಾಗದ ಜಿಲ್ಲೆಗಳಲ್ಲಿ ಬಾರೀ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ
ಸೋಮವಾರ ಕೋಲ್ಕತಾದಲ್ಲಿ 142 ಮಿ.ಮೀ. ಮಳೆಯಾಗಿದ್ದು ಇದು ರಾಜ್ಯದಲ್ಲೇ ಗರಿಷ್ಠ ಎಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News