ಕೆನಡಾ: ಜಸ್ಟಿನ್ ಟ್ರುಡೊ ನೇತೃತ್ವದ ಲಿಬರಲ್ ಪಕ್ಷಕ್ಕೆ ಗೆಲುವು, ಆದರೆ ಬಹುಮತದ ಕೊರತೆ

Update: 2021-09-21 05:26 GMT
Photo: PTI

ಟೊರೊಂಟೊ : ಸೋಮವಾರ ನಡೆದ ಸಂಸತ್ ಚುನಾವಣೆಯಲ್ಲಿ ಕೆನಡಿಯನ್ನರು ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಲಿಬರಲ್ ಪಕ್ಷಕ್ಕೆ ಸತತ ಮೂರನೇ ಬಾರಿ ಗೆಲುವು ನೀಡಿದರು. ಆದರೆ ಬಹುಪಾಲು ಸ್ಥಾನಗಳನ್ನು ಗೆಲ್ಲುವ ಟ್ರುಡೊ ಅವರ ಗುರಿ ವಿಫಲವಾದಂತೆ ಕಂಡುಬಂತು.

ಸಿಟಿವಿ ನ್ಯೂಸ್ ಹಾಗೂ  ಕೆನಡಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪ್. ಪ್ರಕಾರ ಟ್ರುಡೊ ನೇತೃತ್ವದ  ಲಿಬರಲ್ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತದೆ ಹಾಗೂ  ಅಲ್ಪಮತದ ಸರಕಾರವನ್ನು ರಚಿಸುತ್ತದೆ.

ಲಿಬರಲ್  ಯಾವುದೇ ಪಕ್ಷಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಹಾದಿಯಲ್ಲಿದೆ. 49 ವರ್ಷದ ಟ್ರೂಡೊ ಅವರು ಮೊದಲ ಬಾರಿ 2015 ರಲ್ಲಿ ಚುನಾವಣೆಯಲ್ಲಿ ಗೆದಿದ್ದರು. ಈಗ ಮೂರನೇ  ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಅಗ್ರಸ್ಥಾನಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಲಿಬರಲ್ ಪಕ್ಷ  148 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಕನ್ಸರ್ವೇಟಿವ್ಸ್ 103 ರಲ್ಲಿ, ಕ್ವಿಬೆಕ್ ಮೂಲದ ಬ್ಲಾಕ್ ಕ್ವಿಬೆಕೋಯಿಸ್ 28 ರಲ್ಲಿ ಹಾಗೂ  ಎಡಪಂಥೀಯ ನ್ಯೂ ಡೆಮಾಕ್ರಟಿಕ್ ಪಾರ್ಟಿ 22 ರಲ್ಲಿ ಮುಂಚೂಣಿಯಲ್ಲಿದೆ..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News