ಉತ್ತರ ಪ್ರದೇಶದಲ್ಲಿ ಜನಸಂಖ್ಯೆ ನಿಯಂತ್ರಣದ ಕಾನೂನು ಸೂಕ್ತ ಸಮಯದಲ್ಲಿ ಜಾರಿಗೆ: ಆದಿತ್ಯನಾಥ್

Update: 2021-09-21 13:08 GMT

ಲಕ್ನೊ: ರಾಜ್ಯ ಸರಕಾರವು ಜನಸಂಖ್ಯೆ ನಿಯಂತ್ರಣಕ್ಕಾಗಿ 'ಸರಿಯಾದ ಸಮಯದಲ್ಲಿ' ಕಾನೂನನ್ನು ತರಲಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಜನಸಂಖ್ಯೆಯನ್ನು ಸ್ಥಿರಗೊಳಿಸುವ ಹಾಗೂ  ತಾಯಂದಿರು ಮತ್ತು ಶಿಶುಗಳ ಮರಣವನ್ನು ಸಮಯಕ್ಕೆ ಅನುಗುಣವಾಗಿ ಕಡಿಮೆ ಮಾಡುವ ನೀತಿಯನ್ನು ಸರಕಾರವು ಜುಲೈನಲ್ಲಿ ಬಿಡುಗಡೆ ಮಾಡಿತ್ತು, ಹೆಚ್ಚುತ್ತಿರುವ ಜನಸಂಖ್ಯೆಯು 'ಅಭಿವೃದ್ಧಿಗೆ ಅಡಚಣೆ' ಆಗಿದೆ ಎಂದು ಆದಿತ್ಯನಾಥ್ ಅವರು ಹೇಳಿದ್ದಾರೆ.

"ಎಲ್ಲವನ್ನೂ ಸೂಕ್ತ ಸಮಯದಲ್ಲಿ ಮಾಡಲಾಗುತ್ತದೆ. ರಾಮ ಮಂದಿರ ನಿರ್ಮಾಣದ ದಿನಾಂಕವನ್ನು ಯಾವಾಗ ಪ್ರಕಟಿಸಲಾಗುವುದು ಎಂದು ಮಾಧ್ಯಮಗಳು ಮೊದಲು ಬಿಜೆಪಿಯನ್ನು ಪ್ರಶ್ನಿಸುತ್ತಿದ್ದವು, ಆದರೆ ಕೋವಿಡ್ -19 ಸಾಂಕ್ರಾಮಿಕದ ಹೊರತಾಗಿಯೂ ಪ್ರಧಾನಿ (ನರೇಂದ್ರ ಮೋದಿ) ಕಳೆದ ವರ್ಷ ಆಗಸ್ಟ್ 5 ರಂದು ಅಯೋಧ್ಯೆಯಲ್ಲಿರುವ ದೇವಸ್ಥಾನಕ್ಕೆ ಅಡಿಪಾಯ ಹಾಕಿದರು. ಎಲ್ಲರೂ ಈಗ ಸಂತೋಷವಾಗಿರಬೇಕು''ಎಂದು ಆದಿತ್ಯನಾಥ್ ಸಮಾವೇಶವೊಂದರಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News