ಭಾರತದ ಆರ್ಥಿಕ ಪ್ರಗತಿ ಪ್ರಮಾಣ ಅಂದಾಜನ್ನು ಕಡಿಮೆಗೊಳಿಸಿದ ಎಡಿಬಿ

Update: 2021-09-22 12:53 GMT

ಹೊಸದಿಲ್ಲಿ: ಭಾರತದ ಆರ್ಥಿಕ ಪ್ರಗತಿ ಪ್ರಮಾಣದ ಅಂದಾಜನ್ನು ಆರ್ಥಿಕ ವರ್ಷ 2021-22ಗೆ ಶೇ10ಕ್ಕೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಇಳಿಸಿದೆ. ಭಾರತದ ಆರ್ಥಿಕ ಪ್ರಗತಿ ಪ್ರಮಾಣ ಶೇ11ರಷ್ಟಾಗಲಿದೆ ಎಂದು ಎಪ್ರಿಲ್ ತಿಂಗಳಲ್ಲಿ ಎಡಿಬಿ ಅಂದಾಜಿಸಿತ್ತು.

ದೇಶದಲ್ಲಿ ಹೆಚ್ಚುತ್ತಿರುವ ಇನ್‍ಪುಟ್ ವೆಚ್ಚಗಳಿಂದಾಗಿ ಹಣದುಬ್ಬರ ಶೇ 5.2ರಷ್ಟಾಗಬಹುದು ಎಂದು ಈ ಹಿಂದೆ ಅಂದಾಜು ಮಾಡಿದ್ದರೆ ಅದನ್ನು ಶೇ 5.5ಕ್ಕೆ ಏರಿಸಲಾಗಿದೆ  ಎಂದೂ ಎಡಿಬಿ ತನ್ನ ಏಷ್ಯನ್ ಡೆವಲಪ್ಮೆಂಟ್ ಔಟ್‍ಲುಕ್ ವರದಿಯಲ್ಲಿ ತಿಳಿಸಿದೆ. ಮೇ ತಿಂಗಳಲ್ಲಿ ದೇಶದಲ್ಲಿ ಏರಿಕೆ ಕಂಡ ಕೋವಿಡ್ ಪ್ರಕರಣಗಳ ಕಾರಣದಿಂದ  ಆರ್ಥಿಕ ಚೇತರಿಕೆ ಕಡಿಮೆಯಾಗುವ ನಿರೀಕ್ಷೆಯಿರುವುದರಿಂದ ಪ್ರಗತಿ ಪ್ರಮಾಣ ಅಂದಾಜು ಕೂಡ ಇಳಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News