ಐಎಎಸ್ ಗೆ ಸೇರಿ ಬಡವರ ಸೇವೆ ಮಾಡುವ ಕನಸು ನನಸಾಗಿದೆ:ಯುಪಿಎಸ್ಸಿ ಟಾಪರ್ ಶುಭಂ ಕುಮಾರ್

Update: 2021-09-24 17:30 GMT
photo: Twitter

ಹೊಸದಿಲ್ಲಿ: ಐಎಎಸ್ ಅಧಿಕಾರಿಯಾಗುವ ಹಾಗೂ ಬಡವರ  ಸೇವೆ ಮಾಡುವ ಕನಸು ನನಸಾಗಿದೆ ಎಂದು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಶುಭಂ ಕುಮಾರ್ ಶುಕ್ರವಾರ ಹೇಳಿದ್ದಾರೆ.

ಪಿಟಿಐ ಜೊತೆ ಮಾತನಾಡಿದ ಅವರು, ಹಳ್ಳಿಗಳ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಹಾಗೂ  ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆ ತಾನು ಗಮನಹರಿಸಲಿರುವ ವಿಚಾರವಾಗಿದೆ ಎಂದು ತನ್ನ ಮೂರನೇ ಪ್ರಯತ್ನದಲ್ಲಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ 24ರ ವಯಸ್ಸಿನ ಕುಮಾರ್ ಹೇಳಿದರು.

ಕುಮಾರ್  2019 ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಭಾರತೀಯ ರಕ್ಷಣಾ ಖಾತೆಗಳ ಸೇವೆಯಲ್ಲಿ (ಐಡಿಎಎಸ್) ಆಯ್ಕೆಯಾದರು. ಕುಮಾರ್ 2018 ರ ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿ ಯಶಸ್ವಿಯಾಗಲಿಲ್ಲ.

ಐಐಟಿ ಬಾಂಬೆಯಿಂದ ಬ್ಯಾಚುಲರ್ ಆಫ್ ಟೆಕ್ನಾಲಜಿ (ಸಿವಿಲ್ ಇಂಜಿನಿಯರಿಂಗ್) ಪದವೀಧರರಾಗಿರುವ ಅವರು ಮಾನವಶಾಸ್ತ್ರವನ್ನು ತಮ್ಮ ಐಚ್ಛಿಕ ವಿಷಯವಾಗಿ 2020ರ ಪರೀಕ್ಷೆಗೆ ಅರ್ಹತೆ ಪಡೆದಿದ್ದರು.

ಬಿಹಾರದ ಕಟಿಹಾರ್‌ ಮೂಲದ ಕುಮಾರ್, ಪ್ರಸ್ತುತ ಪುಣೆಯ ರಾಷ್ಟ್ರೀಯ ಅಕಾಡೆಮಿ ಆಫ್ ಡಿಫೆನ್ಸ್ ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಇಬ್ಬರು ಒಡಹುಟ್ಟಿದವರಲ್ಲಿ ಕಿರಿಯರಾದ ಕುಮಾರ್ ಅವರ ಅಕ್ಕ ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ (BARC) ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದಾರೆ. ಕುಮಾರ್  ಅವರ ತಂದೆ ಬಿಹಾರದಲ್ಲಿ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News