ಅಫ್ಘಾನ್: ಬಾಂಬ್ ಸ್ಫೋಟ; ಓರ್ವ ಮೃತ್ಯು

Update: 2021-09-25 17:05 GMT

ಕಾಬೂಲ್, ಸೆ.25: ಪೂರ್ವದ ನಂಗರ್‌ಹಾರ್ ಪ್ರಾಂತ್ಯದಲ್ಲಿ ತಾಲಿಬಾನ್‌ಗಳು ಪ್ರಯಾಣಿಸುತ್ತಿದ್ದ ಕಾರನ್ನು ಗುರಿಯಾಗಿಸಿ ರಸ್ತೆ ಬದಿ ಇಟ್ಟಿದ್ದ ಬಾಂಬ್‌ಸ್ಪೋಟಿಸಿದಾಗ ಕಾರಿಗೆ ಹಾನಿಯಾಗಿದ್ದು ಕನಿಷ್ಟ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಈ ಸ್ಫೋಟದ ಹೊಣೆಯನ್ನು ಯಾವ ಸಂಘಟನೆಗಳೂ ಪ್ರತಿಪಾದಿಸಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

ಆದರೆ ಸ್ಫೋಟದಲ್ಲಿ ತಾಲಿಬಾನ್ ಸದಸ್ಯನೊಬ್ಬ ಮೃತಪಟ್ಟಿದ್ದು 4 ನಾಗರಿಕರ ಸಹಿ 7 ಮಂದಿ ಗಾಯಗೊಂಡಿರುವುದಾಗಿ ನಂಗರ್‌ಹಾರ್‌ನ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದ್ದಾರೆ.

2014ರಿಂದ ಅಫ್ಘಾನ್‌ನಲ್ಲಿ ನೆಲೆ ಭದ್ರಪಡಿಸುತ್ತಿರುವ ಐಸಿಸ್ ಈ ದಾಳಿ ನಡೆಸಿರಬಹುದು ಎಂದು ಶಂಕಿಸಲಾಗಿದೆ. ಕಳೆದ ವಾರ ಜಲಾಲಾಬಾದ್‌ನಲ್ಲಿ ನಡೆದ ಇದೇ ರೀತಿಯ ಸ್ಫೋಟದಲ್ಲಿ 12 ಮಂದಿ ಮೃತರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News