ಉಕ್ರೇನ್ ನಲ್ಲಿ ನೇಟೊ ಸೇನಾನೆಲೆ ವಿಸ್ತರಣೆ: ಸೂಕ್ತ ಪ್ರತಿಕ್ರಮ ಕೈಗೊಳ್ಳಲು ರಶ್ಯಾ ನಿರ್ಧಾರ

Update: 2021-09-27 16:06 GMT

 ಮಾಸ್ಕೋ, ಸೆ.27: ಉಕ್ರೇನ್ನಲ್ಲಿ ನೇಟೊ ಮಿಲಿಟರಿ ಮೂಲಸೌಕರ್ಯ ವಿಸ್ತರಣೆಯು ರಶ್ಯಾಕ್ಕೆ ಅಪಾಯದ ಸಂಕೇತವಾಗಿದ್ದು ತಮ್ಮ ಭದ್ರತೆಯನ್ನು ರಕ್ಷಿಸಿಕೊಳ್ಳಲು ರಶ್ಯಾ ಮತ್ತು ಬೆಲಾರೂಸ್ಗಳು ಕ್ರಮ ಕೈಗೊಳ್ಳುವ ಅನಿವಾರ್ಯತೆಯಿದೆ ಎಂದು ರಶ್ಯಾದ ಮೂಲಗಳು ಹೇಳಿವೆ. ಉಕ್ರೇನ್ನಲ್ಲಿ ಅಮೆರಿಕ ಮತ್ತು ನೇಟೊದ ಸೇನೆಗಳ ಚಟುವಟಿಕೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ರಶ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ರೊಂದಿಗೆ ಚರ್ಚಿಸಿದ್ದು ಎರಡೂ ದೇಶಗಳು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಲು ನಿರ್ಧರಿಸಲಾಗಿದೆ ಎಂದು ಇದಕ್ಕೂ ಮುನ್ನ ಬೆಲಾರೂಸ್ನ ಅಧ್ಯಕ್ಷ ಅಲೆಕ್ಸಾಂಡರ್ ಲುಕಶೆಂಕೊ ಹೇಳಿಕೆ ನೀಡಿದ್ದರು.
ಉಕ್ರೇನ್ನಲ್ಲಿ ಅಮೆರಿಕವು ಸೇನಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದು ಇದು ಸೇನಾನೆಲೆಯ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ನಾವಿಬ್ಬರೂ ಒಪ್ಪಿದ್ದೇವೆ ಎಂದು ಲುಕಶೆಂಕೊ ಹೇಳಿರುವುದಾಗಿ ಆರ್ಐಎ ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News