ಲಕ್ಷೀ ದೇವಿಯ ಚಿತ್ರವುಳ್ಳ ಚಿನ್ನದ ಗಟ್ಟಿ ಬಿಡುಗಡೆಗೊಳಿಸಿದ ಬ್ರಿಟನ್

Update: 2021-09-28 16:26 GMT
photo: twitter.com/Indsamachar

ಲಂಡನ್, ಸೆ.28: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬ್ರಿಟನ್ ನ ಟಂಕಸಾಲೆ ಬಿಡುಗಡೆಗೊಳಿಸಿರುವ ಲಕ್ಷ್ಮೀದೇವಿ ಚಿತ್ರವಿರುವ ಚಿನ್ನದ ಗಟ್ಟಿಯ ಮಾರಾಟಕ್ಕೆ ಮಂಗಳವಾರ ಚಾಲನೆ ದೊರಕಿದೆ.

ಬ್ರಿಟನ್ ನ ರಾಯಲ್ ಮಿಂಟ್(ಟಂಕಸಾಲೆ)ಯ ವಿನ್ಯಾಸಗಾರ್ತಿ ಎಮ್ಮಾ ನೋಬಲ್ ಅವರು ಕ್ಯಾಡ್ರಿಫ್ನಲ್ಲಿನ ಸ್ವಾಮಿನಾರಾಯಣ ದೇವಸ್ಥಾನದ ಸಹಯೋಗದೊಂದಿಗೆ ವಿನ್ಯಾಸಗೊಳಿಸಿದ 20 ಗ್ರಾಮ್ ನ ಈ ಚಿನ್ನದ ಗಟ್ಟಿಯಲ್ಲಿ ಸಂಪತ್ತಿನ ದೇವತೆ ಎಂದು ಹಿಂದುಗಳು ನಂಬಿರುವ ಲಕ್ಷ್ಮೀದೇವಿಯ ಚಿತ್ರವಿದೆ. ಎಲ್ಲರನ್ನೂ ಒಳಗೊಳಿಸುವ, ವೈವಿಧ್ಯತೆಗೆ ಬದ್ಧತೆ ಹಾಗೂ ದೇಶದಲ್ಲಿ ವೈವಿಧ್ಯಮ ಸಾಂಸ್ಕೃತಿಕ ಆಚರಣೆಗೆ ಪ್ರೋನೀಡುವ ಪರಿಕಲ್ಪನೆಯ ಪ್ರತೀಕವಾಗಿರುವ ಈ ಚಿನ್ನದ ಗಟ್ಟಿಯ ದರ 1,080 ಪೌಂಡ್ ಎಂದು ರಾಯಲ್ ಮಿಂಟ್ನ ವಿಭಾಗೀಯ ನಿರ್ದೇಶಕ ಆ್ಯಂಡ್ರ್ಯೂ ಡಿಕೆ ಹೇಳಿದ್ದಾರೆ.

ಈ ಚಿನ್ನದ ಗಟ್ಟಿಯನ್ನು ಖರೀದಿಸಲು ಆಸಕ್ತಿ ಇರುವವರು ರಾಯಲ್ ಮಿಂಟ್ ನ ಅಧಿಕೃತ ವೆಬ್ ಸೈಟ್ಗೆ ಭೇಟಿ ನೀಡಿ ವಿವರ ಪಡೆಯಬಹುದು. ಚಿನ್ನದ ಗಟ್ಟಿಯ ಪ್ಯಾಕೆಟ್ನಲ್ಲಿ ಓಂ ಸಂಕೇತ ಇರುತ್ತದೆ. ನವೆಂಬರ್ 4ರಂದು ಸ್ವಾಮಿನಾರಾಯಣ ದೇವಸ್ಥಾನದಲ್ಲಿ ನಡೆಯುವ ದೀಪಾವಳಿ ಪೂಜಾ ಮಹೋತ್ಸವದ ಸಂದರ್ಭ ಸೇವಾಕರ್ತರಿಗೆ ಈ ಚಿನ್ನದ ಗಟ್ಟಿಯನ್ನು ಪ್ರಸಾದದ ರೂಪದಲ್ಲಿ ನೀಡಲಾಗುವುದು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News