ಫ್ರಾನ್ಸ್ ಅಧ್ಯಕ್ಷರತ್ತ ಮೊಟ್ಟೆ ಎಸೆದ ವ್ಯಕ್ತಿಗೆ ಮನೋವೈದ್ಯರಿಂದ ಚಿಕಿತ್ಸೆ

Update: 2021-09-28 16:37 GMT
ಫ್ರಾನ್ಸ್‌ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ 

 ಪ್ಯಾರಿಸ್, ಸೆ.28: ಫ್ರಾನ್ಸ್ ಅಧ್ಯಕ್ಷ ಎಮ್ಯಾನುವೆಲ್ ಮಾಕ್ರನ್ರತ್ತ ಮೊಟ್ಟೆ ಎಸೆದಿದ್ದ ವ್ಯಕ್ತಿಯನ್ನು ಮಾನಸಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
 
ಸೋಮವಾರ ಲಿಯೋನ್ನಲ್ಲಿ ನಡೆದ ಆಹಾರ ಮೇಳದಲ್ಲಿ ಭಾಗವಿಸಿದ್ದ ಮಾಕ್ರನ್ ರತ್ತ 19 ವರ್ಷದ ವ್ಯಕ್ತಿಯೊಬ್ಬ ಮೊಟ್ಟೆ ಎಸೆದಿದ್ದ. ಮಾಕ್ರನ್‌ ರ ಭುಜಕ್ಕೆ ಬಡಿದ ಮೊಟ್ಟೆ ಒಡೆಯಲಿಲ್ಲ. ಈತ ವಿದ್ಯಾರ್ಥಿಯಾಗಿದ್ದು ಸರಕಾರಿ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಜೊತೆಗೆ ಮಾನಸಿಕ ಆಸ್ಪತ್ರೆಗೆ ದಾಖಲಿಸಿ ಈತನನ್ನು ಪರೀಕ್ಷೆ ನಡೆಸಲಾಗುತ್ತದೆ ಎಂದು ಅಭಿಯೋಜಕರ ಕಚೇರಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News