ಮೆಟ್ರೋ ಕಾಮಗಾರಿ ವೇಳೆ ಪತ್ತೆಯಾದ ಹಳೆಯ ಬಾವಿ

Update: 2021-09-30 17:40 GMT

ಬೆಂಗಳೂರು: ಡೈರಿ ಸರ್ಕಲ್ ಮತ್ತು ನಾಗವಾರ ನಡುವಿನ 13.88 ಕಿ.ಮೀ.ನ ಟ್ಯಾನರಿ ರಸ್ತೆ ಮೆಟ್ರೋ ನಿಲ್ದಾಣದಿಂದ ಸುಮಾರು 100 ಮೀಟರ್ ದೂರದಲ್ಲಿ ಹಳೆಯ ಬಾವಿ ಪತ್ತೆಯಾಗಿದೆ. ಗುರುವಾರ ಬೆಳಗ್ಗೆ 7.30ರ ವೇಳೆಯಲ್ಲಿ ಭದ್ರ ಟಿಬಿಎಂ ಯಂತ್ರ ಸುರಂಗ ಮಾರ್ಗ ಕೊರೆಯುವಾಗ ಬಾವಿ ಕಾಣಿಸಿದೆ ಎಂದು ನಮ್ಮ ಮೆಟ್ರೋ ಹೇಳಿದೆ. 

ಹಳೆಯ ಬಾವಿಯು ಕಟ್ಟಡದ ಕೆಳಗೆ ಮುಚ್ಚಿ ಹೋಗಿತ್ತು. ಕಟ್ಟಡದ ನೆಲ ಮಹಡಿಯಲ್ಲಿ ಕೋಳಿ ಅಂಗಡಿ ಮತ್ತು ಮೊದಲ ಮಹಡಿಯ ಮನೆಯಲ್ಲಿ 5 ಜನರ ಕುಟುಂಬ ವಾಸವಾಗಿತ್ತು.

ಸುರಕ್ಷತೆ ದೃಷ್ಟಿಯಿಂದ ಕೋಳಿ ಅಂಗಡಿಯನ್ನು ಮುಚ್ಚಲಾಗಿದೆ. ಹಾಗೆಯೇ ಮೊದಲ ಮಹಡಿಯಲ್ಲಿದ್ದ ಕುಟುಂಬಕ್ಕೆ ನಾಗವಾರದ ಬಳಿ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ.

ಹಳೆಯ ಬಾವಿಗೆ ಮರಳು ಮತ್ತು ಕಾಂಕ್ರೀಟ್ ತುಂಬಿ, ಬಳಿಕ ಸುರಂಗ ಮಾರ್ಗ ಕಾಮಗಾರಿ ಮುಂದುವರೆಸಲಾಗುತ್ತದೆ ಎಂದು ನಮ್ಮ ಮೆಟ್ರೋ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News