ಹೈಟಿ ನಿರಾಶ್ರಿತರಿಗೆ ಬಹಾಮಾಸ್, ಕ್ಯೂಬಾ ತಡೆ

Update: 2021-10-01 16:35 GMT

ಹವಾನಾ, ಅ.1: ಸಮುದ್ರಮಾರ್ಗವಾಗಿ ಅಮೆರಿಕ ದೇಶವನ್ನು ತಲುಪಲು ಸಾವಿರಾರು ಹೈಟಿ ಪ್ರಜೆಗಳು ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಿರುವುದಾಗಿ ಬಹಾಮಾಸ್ ಮತ್ತು ಕ್ಯೂಬಾದ ಅಧಿಕಾರಿಗಳು ಹೇಳಿದ್ದಾರೆ.

ಹೈಟಿಯಿಂದ ‘ವಲಸಿಗರ ಪ್ರವಾಹ’ವನ್ನು ತಡೆಯಲು ಬಹಾಮಾಸ್ನ ಆಗ್ನೇಯದಲ್ಲಿ ಗಸ್ತು ನೌಕೆಗಳನ್ನು ನಿಯೋಜಿಸಿದ್ದು ಕಳೆದ 10 ದಿನಗಳಲ್ಲಿ 1 ಸಾವಿರಕ್ಕೂ ಅಧಿಕ ಹೈಟಿ ಪ್ರಜೆಗಳನ್ನು ತಡೆಹಿಡಿದಿರುವುದಾಗಿ ಬಹಾಮಾಸ್ನ ರಕ್ಷಣಾ ಇಲಾಖೆ ಗುರುವಾರ ಹೇಳಿದೆ. 

ಅಪಾಯಕಾರಿ ಹಡಗುಗಳ ಮೂಲಕ ನಡೆಸುವ ವಿಶ್ವಾಸಕ್ಕೆ ಯೋಗ್ಯವಲ್ಲದ ಪ್ರಯಾಣದ ಮೂಲಕ ಹಲವರ ಜೀವವನ್ನು ಅಪಾಯಕ್ಕೆ ತಳ್ಳಬಾರದು ಎಂದು ಹೇಳಿಕೆಯಲ್ಲಿ ಸೂಚಿಸಲಾಗಿದೆ.

ಇದೇ ವೇಳೆ, ಅಮೆರಿಕದ ಫ್ರೋರಿಡಾ ತಲುಪುವ ಉದ್ದೇಶದಿಂದ ಪೂರ್ವದ ಕರಾವಳಿಗೆ ದೋಣಿಗಳ ಮೂಲಕ ಸಾವಿರಾರು ಹೈಟಿ ನಾಗರಿಕರು ಆಗಮಿಸಿದ್ದಾರೆ ಎಂದು ಕ್ಯೂಬಾದ ವಿದೇಶ ವ್ಯವಹಾರ ಇಲಾಖೆ ಹೇಳಿದೆ. ಇವರನ್ನು ಹೈಟಿಗೆ ಗಡೀಪಾರು ಮಾಡಲಾಗುವುದು ಎಂದು ಬಹಾಮಾಸ್ ಮತ್ತು ಕ್ಯೂಬಾ ಘೋಷಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News