ಇಸ್ರೇಲ್ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ಪನಾಮಾ ಪೊಲೀಸರಿಂದ ಕ್ಷಮೆ ಯಾಚನೆ

Update: 2021-10-02 17:22 GMT

ಪನಾಮಾ ಸಿಟಿ, ಅ.2: ಇಸ್ರೇಲ್ ಆಯೋಜಿಸಿದ್ದ ವಿವಾದಾತ್ಮಕ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಪನಾಮಾದ ಪೊಲೀಸ್ ಇಲಾಖೆ ಕ್ಷಮೆ ಯಾಚಿಸಿದೆ. ಈ ತರಬೇತಿ ಶಿಬಿರದಲ್ಲಿ ಅಭ್ಯರ್ಥಿಗಳ ಗುಂಡಿನ ಗುರಿಯಾಗಿ ಸಾಂಪ್ರದಾಯಿಕ ಅರಬ್ ದಿರಿಸು ತೊಟ್ಟಿದ್ದ ಜನರ ಪ್ರತಿಕೃತಿಯನ್ನು ಇರಿಸಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಸಾಂಪ್ರದಾಯಿಕ ತಲೆಯುಡಿಗೆ ಧರಿಸಿದ್ದ ಸಶಸ್ತ್ರಧಾರಿ ವ್ಯಕ್ತಿಯ ಪ್ರತಿಕೃತಿಯ ತಲೆಗೆ ಅಧಿಕಾರಿಯೊಬ್ಬ ಪಿಸ್ತೂಲ್ ಗುರಿ ಇರಿಸಿರುವ ಮತ್ತೊಂದು ವೀಡಿಯೋ ಕೂಡಾ ವೈರಲ್ ಆಗಿತ್ತು. ತರಬೇತಿ ಶಿಬಿರದ ವೀಡಿಯೊಗಳನ್ನು ಇಸ್ರೇಲ್ನ ನ್ಯಾಷನಲ್ ಪೊಲೀಸ್ ಹಾಗೂ ಇಸ್ರೇಲ್ನ ವಾಣಿಜ್ಯ ಮಂಡಳಿ ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿ, ಬಳಿಕ ಡಿಲೀಟ್ ಮಾಡಿತ್ತು. ಪನಾಮದ ಇಸ್ರೇಲ್ ರಾಯಭಾರಿ ಕಚೇರಿಯಲ್ಲಿ ಈ ತರಬೇತಿ ಕಾರ್ಯಕ್ರಮ ನಡೆದಿರುವುದಾಗಿ ಟ್ವಿಟರ್ನಲ್ಲಿ ಉಲ್ಲೇಖಿಸಲಾಗಿತ್ತು.

ನಾವು ಸಾಂಸ್ಕತಿಕ, ಧಾರ್ಮಿಕ ಮತ್ತು ಜನಾಂಗೀಯ ಭಿನ್ನತೆಯನ್ನು ಗೌರವಿಸುತ್ತೇವೆ. ನಮ್ಮ ಉದ್ಧಿಷ್ಟ ಕಾರ್ಯ ಮತ್ತು ಕರ್ತವ್ಯದ ರೀತಿಗೆ ಹೊರತಾದ ಪರಿಸ್ಥಿತಿ ಉದ್ಭವಿಸಿರುವುದಕ್ಕೆ ನಾವು ವಿಷಾದಿಸುತ್ತೇವೆ ಎಂದು ಪನಾಮಾ ಪೊಲೀಸ್ ಇಲಾಖೆ ಶುಕ್ರವಾರ ಹೇಳಿಕೆ ನೀಡಿದೆ.

ಈ ತರಬೇತಿ ಕಾರ್ಯಕ್ರಮಕ್ಕೆ ಪನಾಮಾನದಲ್ಲಿನ ಪೆಲೆಸ್ತೀನಿಯನ್ ಮಾಹಿತಿ ಕಾರ್ಯಾಲಯವೂ ಖಂಡನೆ ಸೂಚಿಸಿದೆ. ಈ ತರಬೇತಿ ಕಾರ್ಯಕ್ರಮವು ಹಿಂಸೆ ಮತ್ತು ಜನಾಂಗಭೇದ ನೀತಿಯನ್ನು ಪ್ರೋಜತೆಗೆ, ಹಿಜಾಬ್ ಅಥವಾ ಇದೇ ರೀತಿಯ ದಿರಿಸು ಧರಿಸುವವರನ್ನು ಭಯೋತ್ಪಾದಕರು ಎಂದು ವರ್ಗೀಕರಿಸುವ ರೀತಿಯಲ್ಲಿದೆ ಎಂದು ಪೆಲೆಸ್ತೀನ್- ಪನಾಮ ಒಗ್ಗಟ್ಟಿಗಾಗಿನ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಭದ್ರತಾ ಪಡೆಗಳ ತರಬೇತಿ ಕಾರ್ಯಕ್ರಮದಲ್ಲಿ ವಿದೇಶಿ ದೇಶಗಳ ಮಧ್ಯಪ್ರವೇಶವನ್ನು ರದ್ದುಗೊಳಿಸುವಂತೆ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News