×
Ad

ನೀವು ಇದನ್ನುನೋಡಿದ್ದೀರಾ?: ಲಖಿಂಪುರ್ ಘಟನೆಯ ವೀಡಿಯೊವನ್ನು ತೋರಿಸಿ ಪ್ರಧಾನಿಗೆ ಪ್ರಿಯಾಂಕಾ ಗಾಂಧಿ ಪ್ರಶ್ನೆ

Update: 2021-10-05 11:02 IST

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಲಕ್ನೋ ಭೇಟಿಗೆ ಕೆಲವೇ ಗಂಟೆಗಳು ಬಾಕಿ ಇರುವಾಗ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರಾಜ್ಯದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರ ಮೇಲೆ ಎಸ್ ಯುವಿ ಚಲಾಯಿಸುತ್ತಿರುವ ವೈರಲ್ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಧಾನ ಮಂತ್ರಿಯವರಿಗೆ ಈ ವೀಡಿಯೊವನ್ನು ನೋಡಿದ್ದೀರಾ? ಎಂಬ ಪ್ರಶ್ನೆಯನ್ನು ಕೇಳಿದ್ದಾರೆ.

"@narendramodi ಸರ್, ನಿಮ್ಮ ಸರಕಾರ ಕಳೆದ 28 ಗಂಟೆಗಳ ಕಾಲ ಯಾವುದೇ ಆದೇಶ ಹಾಗೂ ಎಫ್ ಐಆರ್  ಇಲ್ಲದೆ ನನ್ನನ್ನು ಕಸ್ಟಡಿಯಲ್ಲಿ ಇರಿಸಿದೆ. ಅನ್ನದಾತ (ರೈತರನ್ನು) ಪುಡಿ ಮಾಡಿದ ಈ ವ್ಯಕ್ತಿಯನ್ನು ಇನ್ನೂ ಬಂಧಿಸಲಾಗಿಲ್ಲ ಏಕೆ?" ಎಂದು ಇಂದು ಬೆಳಗ್ಗೆ ಪ್ರಶ್ನಿಸಿರುವ ಪ್ರಿಯಾಂಕಾ ಗಾಂಧಿ ವೈರಲ್ ವಿಡಿಯೋ ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ರೈತರ ಮೇಲೆ ಎಸ್ ಯುವಿ ಯನ್ನು ಚಲಾಯಿಸುತ್ತಿರುವುದು ಕಂಡಬಂದಿದೆ.

ಉತ್ತರಪ್ರದೇಶದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಪ್ರಧಾನಮಂತ್ರಿ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News