ಗಿನಿಯಾ ಪ್ರಧಾನಿಯಾಗಿ ಮುಹಮ್ಮದ್ ಬಿವೊಗುಯಿ ಆಯ್ಕೆ
Update: 2021-10-07 22:22 IST
ಕೊನಾಕ್ರಿ, ಅ.7: ಕೃಷಿ ಹಣಕಾಸು ವಿಷಯದಲ್ಲಿ ಪರಿಣತರಾಗಿರುವ ಮಾಜಿ ಅಧಿಕಾರಿ ಮುಹಮ್ಮದ್ ಬಿವೊಗುಯಿಯನ್ನು ದೇಶದ ಮುಂದಿನ ಪ್ರಧಾನಿಯನ್ನಾಗಿ ಆಯ್ಕೆ ಮಾಡಿರುವುದಾಗಿ ಗಿನಿಯಾದ ಸೇನಾಡಳಿತ ಘೋಷಿಸಿದೆ.
ದೇಶವನ್ನು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮರಳಿಸುವ ನಿಟ್ಟಿನಲ್ಲಿ ಇದು ಮೊದಲ ಹೆಜ್ಜೆಯಾಗಿದೆ ಎಂದು ಸೇನೆ ಹೇಳಿದೆ. ವಿಶ್ವಸಂಸ್ಥೆ ಸಹಿತ ಹಲವು ಅಂತರಾಷ್ಟ್ರೀಯ ಸಂಘಟನೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವಿಯಾಗಿರುವ ಬಿವೊಗುಯಿಗೆ ರಾಷ್ಟ್ರೀಯ ಸರಕಾರದಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿಲ್ಲ. ಇಂಜಿನಿಯರಿಂಗ್ ಪದವೀಧರನಾಗಿರುವ ಬಿವೊಗುಯಿ ಕೃಷಿ ಅಭಿವೃದ್ಧಿ ನಿಧಿ ಮತ್ತು ಅಪಾಯ ನಿರ್ವಹಣೆ ವಿಷಯದಲ್ಲಿ ಅಪಾರ ಪರಿಣತಿ ಹೊಂದಿದ್ದು ಆಫ್ರಿಕನ್ ಏಕತೆಯ ಸಂಘಟನೆಯ ಪ್ರಥಮ ಪ್ರಧಾನ ಕಾರ್ಯದರ್ಶಿಯಾಗಿದ್ದ ಗಿನಿಯಾದ ಪ್ರಭಾವೀ ರಾಜತಾಂತ್ರಿಕ ಡಿಯಾಲೊ ಟೆಲ್ಲಿಯ ಸೋದರಳಿಯನಾಗಿದ್ದಾರೆ . ಡಿಯಾಲೊ ಟೆಲ್ಲಿಯನ್ನು 1977ರಲ್ಲಿ ಸೆಕೊವು ಟೂರೆ ನೇತೃತ್ವದ ಆಡಳಿತ 1977ರಲ್ಲಿ ಹತ್ಯೆ ಮಾಡಿತ್ತು.