ಉನ್ನತ ನಾಯಕತ್ವದಿಂದ ಕೆಳಗಿಳಿಸಿದ ಬಳಿಕ ʼಟ್ವಿಟರ್‌ ಬಯೋʼದಿಂದ ಬಿಜೆಪಿ ಹೆಸರು ತೆರವುಗೊಳಿಸಿದ ಸುಬ್ರಮಣಿಯನ್‌ ಸ್ವಾಮಿ

Update: 2021-10-08 07:06 GMT

ಹೊಸದಿಲ್ಲಿ: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ನಾಯಕತ್ವದಿಂದ ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್‌ ಸ್ವಾಮಿ, ಇತ್ತೀಚೆಗೆ ರೈತರ ಪರವಾಗಿ ಹೇಳಿಕೆ ನೀಡಿದ್ದ ವರುಣ್‌ ಗಾಂಧಿ, ಮೇನಕಾ ಗಾಂಧಿ ಸೇರಿದಂತೆ ಹಲವರನ್ನು ಕೆಳಗಿಸಲಾಗಿತ್ತು. ಈ ನಿರ್ಧಾರ ವಿವಾದಕ್ಕೆ ಗ್ರಾಸವಾಗಿತ್ತು. ಇದೀಗ ಈ ಹಿನ್ನೆಲೆಯಲ್ಲಿ ಸುಬ್ರಮಣಿಯನ್‌ ಸ್ವಾಮಿ ತಮ್ಮ ಟ್ವಿಟರ್‌ ಬಯೋದಲ್ಲಿ ಬರೆದಿದ್ದ ಬಿಜೆಪಿ ಹೆಸರನ್ನು ಅಳಿಸಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಈ ಕುರಿತು ಮಾತನಾಡಿದ ಸಂಸದ ವರುಣ್‌ ಗಾಂಧಿ, "ನಾನು ಇದುವರೆಗೂ ಒಂದೇ ಒಂದು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿಲ್ಲ. ಐದು ವರ್ಷಗಳಿಂದ ನಾನು ಅದರಲ್ಲಿ ಇದ್ದೆ ಎನ್ನುವುದೇ ನನಗೆ ತಿಳಿದಿಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ. 

ಬಿಜೆಪಿ ಪ್ರಕಟಿಸಿದ 80 ಮಂದಿ ರಾಷ್ಟ್ರೀಯ ಕಾರ್ಯಕಾರಿಣಿ ಕಮಿಟಿ ಸದಸ್ಯರಲ್ಲಿ ಹಿರಿಯ ನಾಯಕರಾದ ಎಲ್.ಕೆ ಅಡ್ವಾಣಿ, ಮುರಳಿ ಮನೋಹರ್‌ ಜೋಶಿ ಸ್ಥಾನ ಪಡೆದಿದ್ದರೂ, ಹಲವು ಹಿರಿಯ ನಾಯಕರ ಹೆಸರನ್ನು ಕೈ ಬಿಡಲಾಗಿತ್ತು. 

ಸುಬ್ರಮಣಿಯನ್‌ ಸ್ವಾಮಿಯವರ ಹಿಂದಿನ ಟ್ವಿಟರ್‌ ಬಯೋ

ಸುಬ್ರಮಣಿಯನ್‌ ಸ್ವಾಮಿಯವರ ಈಗಿನ ಟ್ವಿಟರ್‌ ಬಯೋ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News