ಕೇಂದ್ರ ವಿದ್ಯುತ್ ಬಿಕ್ಕಟ್ಟು ನಿರಾಕರಿಸುತ್ತಿರುವ ನಡುವೆಯೂ ತುರ್ತು ಸಭೆ ನಡೆಸುತ್ತಿರುವ ವಿವಿಧ ರಾಜ್ಯಗಳ ಸಿಎಂಗಳು

Update: 2021-10-12 05:20 GMT

ಹೊಸದಿಲ್ಲಿ: ವಿದ್ಯುತ್ ಬಿಕ್ಕಟ್ಟಿನಿಂದ ಎಚ್ಚೆತ್ತಿರುವ ಉತ್ತರಪ್ರದೇಶ ಹಾಗೂ ಕೇರಳದ ಮುಖ್ಯಮಂತ್ರಿಗಳು ತುರ್ತು ಸಭೆಗಳನ್ನು ನಡೆಸಿದರು. ಪಂಜಾಬ್‌ನಲ್ಲಿ ಪ್ರತಿದಿನ 4-5 ಗಂಟೆಗಳ ಕಾಲ ನಿಗದಿತ ವಿದ್ಯುತ್ ಕಡಿತದಿಂದಾಗಿ ಉದ್ಯಮ ನಷ್ಟ ಅನುಭವಿಸುತ್ತಿರುವ ಬಗ್ಗೆ ಕಳವಳ ವ್ಯಕ್ತವಾಗಿದೆ.

ಕಲ್ಲಿದ್ದಲು ಕೊರತೆಯಿಂದ ದೇಶದಲ್ಲಿ ವಿದ್ಯುತ್ ಬಿಕ್ಕಟ್ಟು ಇಲ್ಲ ಎಂದು ಕೇಂದ್ರ ಇಂಧನ ಸಚಿವ ರಾಜ್ ಕುಮಾರ್ ಸಿಂಗ್ ಹೇಳಿಕೆಗೆ ವಿರುದ್ಧವಾಗಿ, ಎನ್ ಡಿಎ ಮಿತ್ರಪಕ್ಷ ಜೆಡಿಯು ವರಿಷ್ಠ ನಿತೀಶ್ ಕುಮಾರ್ ರಾಜ್ಯಕ್ಕೆ ಸಾಕಷ್ಟು ಪ್ರಮಾಣದ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಇದೆ ಎಂದು ಸೋಮವಾರ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಆದಿತ್ಯನಾಥ್ ಅವರು ಉತ್ತರಪ್ರದೇಶ ಪವರ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಲಕ್ನೋದಲ್ಲಿ ವಿವಿಧ ಡಿಸ್ಕಾಮ್‌ಗಳ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

"ವಿದ್ಯುತ್ ಕಡಿತವು ದೊಡ್ಡ ಉತ್ಪಾದನಾ ನಷ್ಟವನ್ನು ಉಂಟುಮಾಡುತ್ತಿದೆ. ಉಕ್ಕಿನ ಅಥವಾ ಪ್ಲಾಸ್ಟಿಕ್‌ನಂತಹ ನಿರಂತರ ಪ್ರಕ್ರಿಯೆ ಅಗತ್ಯವಿರುವ ಕೈಗಾರಿಕೆಗಳು ಪಿಎಸ್‌ಪಿಸಿಎಲ್‌ನಿಂದ ನಿರಂತರ ಪೂರೈಕೆಯ ವೈಫಲ್ಯದಿಂದಾಗಿ ನಡೆಸಲು ವಿಫಲವಾಗಿವೆ’’ ಎಂದು ಫೆಡರೇಶನ್ ಆಫ್ ಪಂಜಾಬ್ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬದೀಶ್ ಜಿಂದಾಲ್ ಹೇಳಿದರು.

ಆನ್‌ಲೈನ್ ತರಗತಿಗಳ ದೃಷ್ಟಿಯಿಂದ ಲೋಡ್ ಶೆಡ್ಡಿಂಗ್ ವಿಧಿಸದಿರಲು ಕೇರಳ ನಿರ್ಧರಿಸಿದೆ. ಹೊರಗಿನಿಂದ 300MW ಪಡೆಯಬಹುದಾದರೆ, ರಾಜ್ಯವು ಅಕ್ಟೋಬರ್ 19 ರವರೆಗೆ ಲೋಡ್ ಶೆಡ್ಡಿಂಗ್ ಇಲ್ಲದೆ ಇರಬಹುದು. ಆದರೆ ದಿನಕ್ಕೆ 2 ಕೋಟಿ ರೂ. ಬೇಕಾಗುತ್ತದೆ.

“ಸಮಸ್ಯೆ ಇರುವುದು ನಿಜ. ಎನ್ ಟಿ-ಪಿಸಿ ಹಾಗೂ ಇತರ ಕಂಪನಿಗಳಿಂದ ಒದಗಿಸಲಾದ ಯಾವುದೇ ವಿದ್ಯುತ್ ನಮಗೆ (ಬಿಹಾರ) ಸಿಗುತ್ತಿಲ್ಲ ಎಂಬುದು ನಿಜ. ಇಂತಹ ಪರಿಸ್ಥಿತಿ ಉದ್ಭವಿಸಲು ಕೆಲವು ಕಾರಣಗಳಿವೆ. ಇದು ಬಿಹಾರದಲ್ಲಿ ಮಾತ್ರವಲ್ಲ, ಎಲ್ಲೆಡೆ ಇದೆ ಎಂದು ಪಾಟ್ನಾದಲ್ಲಿ ನಿತೀಶ್ ಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News