×
Ad

ಜಮ್ಮು-ಕಾಶ್ಮೀರ: ಮೂವರು ಉಗ್ರರ ಗುಂಡಿಕ್ಕಿ ಹತ್ಯೆ

Update: 2021-10-12 12:42 IST
photo: IANS

ಶ್ರೀನಗರ: ಲಷ್ಕರ್-ಎ-ತೈಯಬ್ ನ ರೆಸಿಸ್ಟೆನ್ಸ್ ಫ್ರಂಟ್ ಗೆ ಸೇರಿರುವ ಮೂವರು ಉಗ್ರರನ್ನು ಮಂಗಳವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಮೂವರು ಉಗ್ರರಲ್ಲಿ ಒಬ್ಬನಾಗಿದ್ದ ಮುಖ್ತಾರ್ ಷಾ ಬಿಹಾರದ ಭಾಗಲ್ಪುರ ಜಿಲ್ಲೆಯ ನಿವಾಸಿ ವೀರೇಂದ್ರ ಪಾಸ್ವಾನ್ ನನ್ನು ಇತ್ತೀಚೆಗೆ ಕೊಂದಿದ್ದಾನೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ವಿಜಯ್ ಕುಮಾರ್ ಹೇಳಿದ್ದಾರೆ. ಪಾಸ್ವಾನ್ ಶ್ರೀನಗರದಲ್ಲಿ ಬೀದಿ ಬದಿ ಆಹಾರವನ್ನು ಮಾರಾಟ ಮಾಡುತ್ತಿದ್ದರು.

ಅಕ್ಟೋಬರ್ 5 ರಂದು 68 ವರ್ಷದ ಮಖಾನ್ ಲಾಲ್ ಬಿಂದ್ರೂ ಎಂಬ ಕಾಶ್ಮೀರಿ ಪಂಡಿತ್ ಹಾಗೂ  ಪಾಸ್ವಾನ್ ಅವರನ್ನು ಉಗ್ರರು ಹತ್ಯೆಗೈದಿದ್ದರು.

ಇಲ್ಲಿಯವರೆಗೆ, ಪೊಲೀಸರು ಮಂಗಳವಾರ ಹತ್ಯೆಗೀಡಾದ ಮೂವರಲ್ಲಿ ಗಂದರ್‌ಬಾಲ್ ಜಿಲ್ಲೆಯ ನಿವಾಸಿಯಾಗಿದ್ದ ಷಾ ನನ್ನು ಮಾತ್ರ ಗುರುತಿಸಿದ್ದಾರೆ. ಪಾಸ್ವಾನ್ ನನ್ನು ಕೊಂದ ನಂತರ ಷಾ ಶೋಪಿಯಾನ್ ಗೆ ತೆರಳಿದ್ದ ಎಂದು ಪೊಲೀಸರು ಹೇಳಿಕೊಂಡಿದ್ದಾರೆ.

ಬಿಂದ್ರೂ ಮತ್ತು ಲೋನ್ ಹತ್ಯೆಗೆ ರೆಸಿಸ್ಟೆನ್ಸ್ ಫ್ರಂಟ್ ಹೊಣೆ ಹೊತ್ತುಕೊಂಡಿತ್ತು. ಈ ಇಬ್ಬರೂ ಕೇಂದ್ರ ಸರಕಾರಕ್ಕೆ ಸಹಾಯ ಮಾಡಿದ್ದಾರೆ ಎಂದು ಸಂಘಟನೆ ಆರೋಪಿಸಿದೆ ಮತ್ತು ಈ ಹಿಂದೆ ಹಾಗೆ ಮಾಡದಂತೆ ಎಚ್ಚರಿಕೆ ನೀಡಲಾಗಿತ್ತು  ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News