ಬಿಜೆಪಿಗೆ ಸೇರಿದ ನಂತರ ಸುಖ ನಿದ್ದೆ, ಯಾವುದೇ ವಿಚಾರಣೆಗಳಿಲ್ಲ: ಮಾಜಿ ಕಾಂಗ್ರೆಸ್ ಶಾಸಕ
Update: 2021-10-14 19:22 IST
ಪುಣೆ: ಬಿಜೆಪಿಗೆ ಸೇರಿದ ನಂತರ ಎಲ್ಲವೂ ಸುಗಮವಾಗಿ ಸಾಗುತ್ತಿದೆ. ಶಾಂತವಾಗಿದೆ. ಯಾವುದೇ ವಿಚಾರಣೆಗಳಿಲ್ಲದ ಕಾರಣ ಸುಖ ನಿದ್ದೆ ಬರುತ್ತಿದೆ ಎಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಮಾಜಿ ಸಚಿವ ಹರ್ಷವರ್ಧನ್ ಪಾಟೀಲ್ ಹೇಳಿದ್ದಾರೆ.
ಪ್ರತಿಪಕ್ಷಗಳನ್ನು ಗುರಿಯಾಗಿಸಲು ಕೇಂದ್ರ ಏಜೆನ್ಸಿಗಳಾದ ಸಿಬಿಐ, ಈಡಿ ಹಾಗೂ ಎನ್‌ಸಿಬಿ ದುರುಪಯೋಗ ಮಾಡಲಾಗುತ್ತಿದೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ ದಿನವೇ ಪಾಟೀಲ್ ಈ ಹೇಳಿಕೆ ನೀಡಿದ್ದಾರೆ.
ಪುಣೆ ಜಿಲ್ಲೆಯ ಇಂದಾಪುರದ ಮಾಜಿ ಶಾಸಕರಾಗಿದ್ದ ಪಾಟೀಲ್ ಅವರು 2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿಗೆ ಪಕ್ಷಾಂತರವಾಗಿದ್ದರು.