ಜಮ್ಮು-ಕಾಶ್ಮೀರ: ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಸೇನಾಧಿಕಾರಿ,ಯೋಧನಿಗೆ ಗಂಭೀರ ಗಾಯ

Update: 2021-10-14 17:20 GMT

ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಚ್ ನಲ್ಲಿ ಇಂದು ನಡೆದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಸೇನಾಧಿಕಾರಿ ಹಾಗೂ  ಓರ್ವ ಯೋಧ ಗಂಭೀರವಾಗಿ ಗಾಯಗೊಂಡಿದ್ದಾರೆ.

ಐವರು ಸೈನಿಕರು ಸಾವನ್ನಪ್ಪಿದ ಐದು ದಿನಗಳ ನಂತರ ಸೇನೆ ಹಾಗೂ ಭಯೋತ್ಪಾದಕರ ನಡುವೆ ಪೂಂಚ್-ರಾಜೌರಿ ಅರಣ್ಯದಲ್ಲಿ ಗುಂಡಿನ ಕಾಳಗವು ಭುಗಿಲೆದ್ದಿತು. ಕಾರ್ಯಾಚರಣೆಯಿಂದಾಗಿ ಜಮ್ಮು-ಪೂಂಚ್-ರಾಜೌರಿ ಹೆದ್ದಾರಿಯನ್ನು ಮುಚ್ಚಲಾಗಿದೆ.

2021 ಅಕ್ಟೋಬರ್ 14 ರಂದು ಸಂಜೆಯ ವೇಳೆಯಲ್ಲಿ ಸೇನಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ಸೇನಾ ವಕ್ತಾರರು ಹೇಳಿದರು.

"ಗುಂಡಿನ  ವಿನಿಮಯದ ಸಮಯದಲ್ಲಿ ಓರ್ವ ಜೆಸಿಒ ಹಾಗೂ ಓರ್ವ  ಸೈನಿಕ ಗಂಭೀರ ವಾಗಿ ಗಾಯಗೊಂಡಿದ್ದಾರೆ. ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ " ಎಂದು ಅವರು ಹೇಳಿದರು.

ಸೋಮವಾರ, ಡೇರಾ ಕಿ ಗಾಲಿ (ಡಿಕೆಜಿ) ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕಿರಿಯ ನಿಯೋಜಿತ ಅಧಿಕಾರಿ ಸೇರಿದಂತೆ ಐವರು   ಸೇನಾ ಸೈನಿಕರು ಹುತಾತ್ಮರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News