ಗೂಗಲ್ ವರದಿ: ರ‍್ಯಾನ್ಸಮ್‍ವೇರ್‌ ನಿಂದ ಗರಿಷ್ಠ ಬಾಧಿತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 6ನೇ ಸ್ಥಾನ

Update: 2021-10-16 09:47 GMT

ಹೊಸದಿಲ್ಲಿ:  ಕಳೆದ ಒಂದೂವರೆ ವರ್ಷಗಳಲ್ಲಿ ಸಲ್ಲಿಸಲಾಗಿದ್ದ 8 ಕೋಟಿಗೂ ಅಧಿಕ ರ್ಯಾನ್ಸಮ್‍ವೇರ್ ಮಾದರಿಗಳನ್ನು  ವಿಶ್ಲೇಷಿಸಿ  ಹೊರತರಲಾಗಿರುವ ಗೂಗಲ್ ವರದಿಯೊಂದು ಅಚ್ಚರಿಯ ಮಾಹಿತಿ ಹೊರಗೆಡಹಿದೆ. ರ್ಯಾನ್ಸಮ್‍ವೇರ್ ಹ್ಯಾಕ್‌ ನಿಂದ ಅತ್ಯಂತ ಹೆಚ್ಚು ಬಾಧಿತ 140 ದೇಶಗಳ ಪೈಕಿ ಭಾರತ ಆರನೇ ಸ್ಥಾನದಲ್ಲಿದೆ ಎಂದು ವರದಿ ಹೇಳಿದೆ.

ರ್ಯಾನ್ಸಮ್‍ವೇರ್‍ನಿಂದ ಗರಿಷ್ಠ ಬಾಧಿತ ದೇಶ ಇಸ್ರೇಲ್ ಆಗಿದ್ದರೆ ನಂತರದ ಸ್ಥಾನದಲ್ಲಿ ದಕ್ಷಿಣ ಕೊರಿಯ, ವಿಯೆಟ್ನಾಂ, ಚೀನಾ, ಸಿಂಗಾಪುರ, ಭಾರತ, ಕಝಕಸ್ತಾನ್, ಫಿಲಿಪ್ಪೀನ್ಸ್, ಇರಾನ್ ಮತ್ತು ಇಂಗ್ಲೆಂಡ್ ಇದೆ. ವೈರಸ್ ಟೋಟಲ್‍ಗೆ ಸಲ್ಲಿಕೆಯಾದ  ಮಾಹಿತಿಯ ಆಧಾರದಲ್ಲಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.

ಈ ವೈರಸ್ ಟೋಟಲ್ ಸಂಸ್ಥೆ 2004ರಲ್ಲಿ ಆರಂಭಗೊಂಡಿದ್ದರೆ 2012ರಲ್ಲಿ ಗೂಗಲ್ ಅದರ ಒಡೆತನ ಪಡೆದಿತ್ತು,. ಜನವರಿ 2018ರಲ್ಲಿ ಈ ಕಂಪೆನಿಯನ್ನು ಗೂಗಲ್ ಕ್ಲೌಡ್ ಪ್ಲಾಟ್‍ಫಾರ್ಮ್ ಭಾಗವಾಗಿರುವ ಸೈಬರ್ ಸೆಕ್ಯುರಿಟಿ ಸಂಸ್ಥೆ ಕ್ರಾನಿಕಲ್ ಸೆಕ್ಯುರಿಟಿಗೆ ವಹಿಸಲಾಗಿತ್ತು.

ಈ ಬಾರಿ ಪ್ರಕಟವಾದ ವರದಿ ವೈರಸ್ ಟೋಟಲ್‍ನ ಪ್ರಥಮ ರ್ಯಾನ್ಸಮ್‍ವೇರ್ ಕುರಿತ ವರದಿಯಾಗಿದೆ. ಕಳೆದ ವರ್ಷ ಕನಿಷ್ಠ 130 ವಿವಿಧ ರ್ಯಾನ್ಸಮ್‍ವೇರ್ ಕುಟುಂಬಗಳು ಸಕ್ರಿಯವಾಗಿದ್ದವು ಎಂದು ವರದಿ ಹೇಳಿದೆ. ರ್ಯಾನ್ಸಮ್‌ ವೇರ್‌ ಎಂದರೆ ಸಂಸ್ಥೆಗಳ ಖಾಸಗಿ ಮಾಹಿತಿಗಳನ್ನು ಹ್ಯಾಕ್ ಮಾಡಲು ಬಳಸುವ ವಿಧಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News