ಬಿಹಾರದ ಕುಶೇಶ್ವರ ಉಪಚುನಾವಣೆ: ಕಾಂಗ್ರೆಸ್ ಪರ ಆರ್ ಜೆಡಿ ನಾಯಕ ತೇಜ್ ಪ್ರತಾಪ್ ಪ್ರಚಾರ!

Update: 2021-10-17 05:34 GMT

ಪಾಟ್ನಾ:ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ತೀವ್ರ ಮುಜುಗರವಾಗುವಂತಹ ಬೆಳವಣಿಗೆಯಲ್ಲಿ ಅವರ ಹಿರಿಯ ಸಹೋದರ ಹಾಗೂ ಪಕ್ಷದ ಶಾಸಕ ತೇಜ್ ಪ್ರತಾಪ್ ಯಾದವ್ ಅವರು ಕುಶೇಶ್ವರ ಆಸ್ಥಾನ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅತಿರೆಕ್ ಕುಮಾರ್ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ.

ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಛತ್ರ ಜನಶಕ್ತಿ ಪರಿಷತ್,  ಕುಶೇಶ್ವರ ಆಸ್ಥಾನದಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲಿದೆ. ಆದರೆ ತಾರಾಪುರ ವಿಧಾನಸಭಾ ಕ್ಷೇತ್ರದಲ್ಲಿ ಆರ್ ಜೆಡಿ ಪರ ಪ್ರಚಾರ ಮಾಡುವುದಾಗಿ ತೇಜ್ ಪ್ರತಾಪ್ ಘೋಷಿಸಿದ್ದಾರೆ. ಎರಡೂ ವಿಧಾನಸಭಾ ಸ್ಥಾನಗಳ ಉಪಚುನಾವಣೆ ಅಕ್ಟೋಬರ್ 30 ರಂದು ನಡೆಯಲಿದೆ.

"ಕುಶೇಶ್ವರ ಆಸ್ಥಾನ ಹಾಗು ತಾರಾಪುರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಪ್ರಸ್ತುತ ರಾಜಕೀಯ ಪರಿಸ್ಥಿತಿಯನ್ನು ಅಧ್ಯಯನ ಮಾಡಿದ ನಂತರ  ಛತ್ರ ಜನಶಕ್ತಿ ಪರಿಷತ್ ತನ್ನ ಬೆಂಬಲವನ್ನು ಕುಶೇಶ್ವರ ಆಸ್ಥಾನದಿಂದ ಕಾಂಗ್ರೆಸ್ ಅಭ್ಯರ್ಥಿ ಅತಿರೆಕ್ ಕುಮಾರ್ ಮತ್ತು ತಾರಾಪುರದ ಆರ್ ಜೆಡಿ ಅಭ್ಯರ್ಥಿ ಅರುಣ್ ಕುಮಾರ್ ಅವರಿಗೆ ನೀಡಲು ನಿರ್ಧರಿಸಿದೆ. ಛತ್ರ ಜನಶಕ್ತಿ ಪರಿಷತ್ ಎರಡೂ ಅಭ್ಯರ್ಥಿಗಳ ಪರವಾಗಿ ಅವರವರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಮಾಡಬೇಕು ಹಾಗೂ  ಅವರ ಗೆಲುವನ್ನು ಖಚಿತಪಡಿಸಿಕೊಳ್ಳಬೇಕು ”ಎಂದು ತೇಜ್ ಪ್ರತಾಪ್ ಶನಿವಾರ ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿಯ ತಂದೆ ಹಾಗೂ  ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ (ಬಿಪಿಸಿಸಿ) ಕಾರ್ಯಾಧ್ಯಕ್ಷ ಡಾ. ಅಶೋಕ್ ಕುಮಾರ್ ಇತ್ತೀಚೆಗೆ ತೇಜ್ ಪ್ರತಾಪ್ ಅವರನ್ನು ಭೇಟಿ ಮಾಡಿ ಕುಶೇಶ್ವರ ಆಸ್ಥಾನ ಉಪಚುನಾವಣೆಗೆ ಬೆಂಬಲ ಕೋರಿದ್ದರು.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವಿನ ಮೈತ್ರಿ ಮುರಿದು ಬಿದ್ದಿರುವುದನ್ನು ಉಲ್ಲೇಖಿಸಬಹುದು. ಏಕೆಂದರೆ ಎರಡೂ ಪಕ್ಷಗಳು ಎರಡೂ ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News