ಬಾಹ್ಯಾಕಾಶದಲ್ಲಿ ಮೊದಲ ಸಿನಿಮಾ ಚಿತ್ರೀಕರಿಸಿ ಭೂಮಿಗೆ ಮರಳಿದ ರಶ್ಯಾ ಚಿತ್ರತಂಡ

Update: 2021-10-17 16:57 GMT
(ಸಾಂದರ್ಭಿಕ ಚಿತ್ರ):PTI

ಮಾಸ್ಕೋ, ಅ.17: ಬಾಹ್ಯಾಕಾಶದಲ್ಲಿ ಪ್ರಥಮ ಸಿನೆಮ ಚಿತ್ರೀಕರಿಸಿದ ರಶ್ಯದ ಚಿತ್ರತಂಡ 12 ದಿನಗಳ ಕಾರ್ಯ ಮುಗಿಸಿ ರವಿವಾರ ಭೂಮಿಗೆ ಹಿಂತಿರುಗಿದೆ ಎಂದು ರಶ್ಯಾದ ಬಾಹ್ಯಾಕಾಶ ಸಂಸ್ಥೆ ರಾಸ್ಕೋಮೊಸ್ ಹೇಳಿದೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಸಿಬಂದಿ ಒಲೆಗ್ ನೊವಿಟ್ಸ್ಕಿ, ಸಿನೆಮ ನಿರ್ದೇಶಕ ಕ್ಲಿಮ್ ಶಿಪೆಂಕೊ, ನಟಿ ಯೂಲಿಯಾ ಪೆರೆಸಿಲ್ಡ್ ಅವರಿದ್ದ ಸೋಯುರ್ ಎಂಎಸ್-18 ಅಂತರಿಕ್ಷ ನೌಕೆ ರವಿವಾರ ಬೆಳಿಗ್ಗೆ 7:35ಕ್ಕೆ ಪಶ್ಚಿಮ ಕಝಕ್ಸ್ತಾನದ ಹೊರಪ್ರದೇಶದಲ್ಲಿ ಬಂದಿಳಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಕಝಕಿಸ್ತಾನದ ವಿಶಾಲ ಬಯಲುಪ್ರದೇಶದಲ್ಲಿ ಬೃಹತ್ ಪ್ಯಾರೂಶೂಟ್ಗಳ ನೆರವಿನಿಂದ ಅಂತರಿಕ್ಷ ನೌಕೆ ನೆಲವನ್ನು ಸ್ಪರ್ಶಿಸುವ ವೀಡಿಯೊವನ್ನು ರಶ್ಯಾದ ಸರಕಾರಿ ಸ್ವಾಮ್ಯದ ಟಿವಿ ವಾಹಿನಿ ಪ್ರಸಾರ ಮಾಡಿದೆ.

2015ರ ಸಿನಿಮ ‘ಬ್ಯಾಟಲ್ ಫಾರ್ ಸೆವಸ್ಟೊಪೊಲ್’ನಿಂದ ಜನಪ್ರಿಯರಾಗಿರುವ ಪೆರೆಸಿಲ್ಡ್, ತನಗೆ ಬಾಹ್ಯಾಕಾಶದಿಂದ ಭೂಮಿಗೆ ಹಿಂತಿರುಗಲು ಮನಸೇ ಬರಲಿಲ್ಲ. ಬಾಹ್ಯಾಕಾಶಕ್ಕೆ ತೆರಳುವ ಸಂದರ್ಭ ನಿರ್ದೇಶಕರು 12 ದಿನದ ಚಿತ್ರೀಕರಣ ಎಂದಾಗ ಇಷ್ಟೊಂದು ದೀರ್ಘಾವಧಿಯನ್ನು ಹೇಗೆ ಕಳೆಯುವುದು ಎಂದು ಆತಂಕಗೊಂಡಿದ್ದೆ. ಆದರೆ 12 ದಿನ ಕಳೆದದ್ದೇ ತಿಳಿಯಲಿಲ್ಲ ಎಂದು ಸುದ್ಧಿಗಾರರಿಗೆ ಪ್ರತಿಕ್ರಿಯಿಸಿದರು.

 ಪೆರೆಸಿಲ್ಡ್ ಮತ್ತು ಶಿಪೆಂಕೊರನ್ನು ರಶ್ಯಾದ ಬಾಹ್ಯಾಕಾಶ ಕಾರ್ಯಕ್ರಮದ ಕೇಂದ್ರಕಚೇರಿ ರಶ್ಯನ್ ಸ್ಟಾರ್ ಸಿಟಿಗೆ ಕರೆದೊಯ್ಯಲಾಗಿದ್ದು ಅಲ್ಲಿ ‘ವಿಮಾನ ಪ್ರಯಾಣದ ಬಳಿಕದ ಚೇತರಿಕೆ’ಗಾಗಿ ಸುಮಾರು 1 ವಾರ ತಂಗಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News