ಮುಂಬೈನಲ್ಲಿ ಎನ್ಸಿಬಿ ವ್ಯವಹಾರಗಳ ಕುರಿತು ನ್ಯಾಯಾಂಗ ತನಿಖೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಶಿವಸೇನೆ ನಾಯಕ

Update: 2021-10-18 16:16 GMT

ಮುಂಬೈ,ಅ.18: ವಿಹಾರ ನೌಕೆಯಲ್ಲಿ ಮಾದಕ ದ್ರವ್ಯ ಪತ್ತೆ ಪ್ರಕರಣದಲ್ಲಿ ಬಾಲಿವುಡ್ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಬಂಧನದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಮಾದಕದ್ರವ್ಯ ನಿಯಂತ್ರಣ ಘಟಕ (ಎನ್ಸಿಬಿ) ಮತ್ತು ಅದರ ಅಧಿಕಾರಿಗಳ ವ್ಯವಹಾರಗಳ ಕುರಿತು ನ್ಯಾಯಾಂಗ ತನಿಖೆಯನ್ನು ಕೋರಿ ಶಿವಸೇನೆ ನಾಯಕ ಕಿಶೋರ್ ತಿವಾರಿ ಅವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.

ಎನ್ಸಿಬಿಯ ಮುಂಬೈ ವಲಯ ಕಚೇರಿಯ ಅಧಿಕಾರಿಗಳಿಂದ ಬಂಧಿಸಲ್ಪಟ್ಟಿರುವ ಆರ್ಯನ್ ರ ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಸ್ವಯಂಪ್ರೇರಿತವಾಗಿ ಗಮನಕ್ಕೆ ತೆಗೆದುಕೊಳ್ಳುವಂತೆ ತಿವಾರಿ ಸರ್ವೋಚ್ಚ ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ.

ಕಳೆದೆರಡು ವರ್ಷಗಳಿಂದ ಚಲನಚಿತ್ರ ರಂಗದ ಆಯ್ದ ಸೆಲೆಬ್ರಿಟಿಗಳು ಮತ್ತು ಕೆಲವು ಮಾಡೆಲ್ಗಳನ್ನು ಗುರಿಯಾಗಿಸಿಕೊಂಡಿರುವ ಮುಂಬೈನ ಎನ್ಸಿಬಿ ಮತ್ತು ಅದರ ಅಧಿಕಾರಿಗಳ ದುರುದ್ದೇಶಪೂರಿತ ಕಾರ್ಯಶೈಲಿ ಮತ್ತು ಕೊಳಕು ಸೇಡಿನ ವ್ಯವಹಾರಗಳನ್ನು ಬೆಟ್ಟು ಮಾಡಲು ತಾನು ಬಯಸಿದ್ದೇನೆ ಎಂದು ಅರ್ಜಿಯಲ್ಲಿ ಹೇಳಿರುವ ತಿವಾರಿ,ಎನ್ಸಿಬಿ ಅಧಿಕಾರಿಗಳ ಪಾತ್ರವನ್ನು ಬಯಲಿಗೆಳೆಯಲು ವಿಶೇಷ ನ್ಯಾಯಾಂಗ ತನಿಖೆ ಮತ್ತು ವಿಚಾರಣೆಗೆ ಆದೇಶಿಸುವಂತೆ ಕೋರಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News