ಹಝ್ಬುಲ್ಲಾ ಪಡೆಗಳಿಂದ ದಿನವೂ 2000 ಕ್ಷಿಪಣಿ ದಾಳಿ ನಡೆದರೂ ಎದುರಿಸಲು ಸನ್ನದ್ಧ: ಇಸ್ರೇಲ್ ಘೋಷಣೆ‌

Update: 2021-10-18 18:37 GMT

ಜೆರುಸಲೇಂ, ಅ.18: ಲೆಬನಾನ್ನ ಹಝ್ಬುಲ್ಲಾ ಸಂಘಟನೆಯೊಂದಿಗೆ ಯುದ್ಧ ಬಯಸುತ್ತಿಲ್ಲ. ಆದರೆ ಸಂಘರ್ಷ ಉಂಟಾದರೆ ಹಝ್ಬುಲ್ಲಾ ಪಡೆಗಳಿಂದ ದಿನಾ ಸುಮಾರು 2000 ರಾಕೆಟ್ ದಾಳಿ ಎದುರಿಸಲು ತಾನು ಸನ್ನದ್ಧವಾಗಿದ್ದೇನೆ ಎಂದು ಇಸ್ರೇಲ್ ಹೇಳಿದೆ.

ಕ್ಷಿಪಣಿಯನ್ನು ನಿಗ್ರಹಿಸಲು ಕಳೆದ 1 ದಶಕದಿಂದ ಬಳಸಲಾಗುತ್ತಿರುವ ಕಬ್ಬಿಣದ ಶಿಖರದ ರಕ್ಷಣಾ ವ್ಯವಸ್ಥೆಯು ಇಸ್ರೇಲ್ನ ಜನಬಾಹುಳ್ಯದ ವಸತಿ ಪ್ರದೇಶವನ್ನು ಗುರಿಯಾಗಿಸಿ ನಡೆಸಿದ್ದ ಕ್ಷಿಪಣಿ ದಾಳಿಗಳಲ್ಲಿ 90%ದಷ್ಟನ್ನು ತುಂಡರಿಸಿದೆ. ಸುಮಾರು 300ರಷ್ಟು ಕ್ಷಿಪಣಿಗಳು ಮಾತ್ರ ಜನವಸತಿಯಿಲ್ಲದ ಪ್ರದೇಶಕ್ಕೆ ಅಪ್ಪಳಿಸಿದೆ. 2006ರಲ್ಲಿ ಹಝ್ಬುಲ್ಲಾ ಪಡೆಗಳ ವಿರುದ್ಧದ ಯುದ್ಧದ ಸಂದರ್ಭದ ಕ್ಷಿಪಣಿ ದಾಳಿಯ ಪ್ರಮಾಣಕ್ಕಿಂತ ಈಗ ನಡೆಯುತ್ತಿರುವ ಕ್ಷಿಪಣಿ ದಾಳಿ ಅಧಿಕವಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ಮೇ ತಿಂಗಳಿನಲ್ಲಿ ಟೆಲ್ಅವೀವ್ , ಅಶ್ಡಾಡ್ ಮುಂತಾದ ನಗರಗಳ ಮೇಲೆ ನಡೆದ ಕ್ಷಿಪಣಿ ದಾಳಿಗಳು ಇಸ್ರೇಲ್ನ ಇತಿಹಾಸದಲ್ಲೇ ಅತ್ಯಧಿಕವಾಗಿದೆ. ದಿನಾ 400ಕ್ಕೂ ಅಧಿಕ ಕ್ಷಿಪಣಿಗಳು ಲೆಬನಾನ್ನಿಂದ ಇಸ್ರೇಲ್ನತ್ತ ಧಾವಿಸುತ್ತಿದ್ದವು. ಇಸ್ರೇಲ್ ಮೇಲೆ ದಿನಾ 1500ರಿಂದ 2,5000 ಕ್ಷಿಪಣಿ ದಾಳಿ ನಡೆಯುವ ಸಾಧ್ಯತೆಯನ್ನು ನಾವು ಊಹಿಸಿದ್ದು ಇದನ್ನು ಎದುರಿಸಲು ಸನ್ನದ್ಧರಾಗಿದ್ದೇವೆ ಎಂದು ಸೇನೆಯ ಹೋಮ್ಫ್ರಂಟ್ ಗಾರ್ಡ್ನ ಮುಖ್ಯಸ್ಥ ಯೂರಿ ಗಾರ್ಡಿನ್ ಹೇಳಿದ್ದಾರೆ. ಪ್ರಥಮ ಕೊಲ್ಲಿಯುದ್ಧದ ಬಳಿಕ 1992ರಲ್ಲಿ ರಚಿಸಲಾಗಿರುವ ಹೋಮ್ಫ್ರಂಟ್ ಗಾರ್ಡ್ ದೇಶದ ಭದ್ರತೆಗೆ ಎದುರಾಗುವ ಭೀತಿ,

 ಯುದ್ಧ ಅಥವಾ ಪ್ರಾಕೃತಿಕ ವಿಕೋಪದ ಸಂದರ್ಭ ದೇಶವನ್ನು ಸನ್ನದ್ದ ಸ್ಥಿತಿಯಲ್ಲಿರಿಸುವ ಜವಾಬ್ದಾರಿ ನಿರ್ವಹಿಸುತ್ತದೆ. ದೇಶದತ್ತ ನುಗ್ಗಿ ಬರುವ ಕ್ಷಿಪಣಿಗಳ ಪಥವನ್ನು ಕಂಪ್ಯೂಟರ್ ತಂತ್ರಜ್ಞಾನದಿಂದ ಪತ್ತೆಹಚ್ಚಿ, ತಕ್ಷಣ ಬಾಂಬ್ ನಿರೋಧಕ ಟೆಂಟ್ಗಳಿಗೆ ಧಾವಿಸುವಂತೆ ಜನತೆಗೆ ಕರೆ ನೀಡುವ ಅತ್ಯಾಧುನಿಕ ವ್ಯವಸ್ಥೆಯನ್ನು ಹೋಮ್ಫ್ರಂಟ್ ಗಾರ್ಡ್ ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News