ಹರ್ಯಾಣ:ರೈಲ್ ರೋಕೊ ನಡೆಸಿದ ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಿದ ರೈಲ್ವೆ ರಕ್ಷಣಾ ಪಡೆ

Update: 2021-10-19 14:09 GMT
photo: ANI

ಚಂಡಿಗಡ: ರೈತರ ಆರು ಗಂಟೆಗಳ 'ರೈಲು ರೋಕೋ' ಪ್ರತಿಭಟನೆಯ ಭಾಗವಾಗಿ ಹರ್ಯಾಣದಲ್ಲಿ ಸೋಮವಾರ ರೈಲ್ವೆ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಕ್ಕಾಗಿ ಹಲವಾರು ರೈತರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.

ಪ್ರತಿಭಟನಾಕಾರರ ವಿರುದ್ಧ ರೈಲ್ವೆ ರಕ್ಷಣಾ ಪಡೆ ಪ್ರಕರಣಗಳನ್ನು ದಾಖಲಿಸಿದೆ ಎಂದು ರೈಲ್ವೆ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಪ್ರತಿಭಟನಾಕಾರರ ವಿರುದ್ಧ ರೈಲ್ವೇ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಕೇಸ್ ಹಾಕಲಾಗಿದೆ. ಕೇಸ್ ಹಾಕಲ್ಪಟ್ಟವರಲ್ಲಿ ಹೆಚ್ಚಿನವರು ಅಪರಿಚಿತರು ಎಂದು ಹೇಳಿದರು.

ಸೋನಿಪತ್‌ನಲ್ಲಿ ನಾಲ್ವರು ರೈತ ಸಂಘದ ಮುಖಂಡರು ಸೇರಿದಂತೆ 100-120 ಪ್ರತಿಭಟನಾಕಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸರಕಾರಿ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ದೂರವಾಣಿ ಮೂಲಕ ತಿಳಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಬುಕ್ ಮಾಡಿದ ಇತರ ಜನರು ಅಜ್ಞಾತ ಮತ್ತು ಹೆಸರಿಲ್ಲ ಎಂದು ಅವರು ಹೇಳಿದರು.

ಅಂಬಾಲದಲ್ಲಿಯೂ ಪ್ರಕರಣ ದಾಖಲಿಸಲಾಗಿದೆ ಎಂದು ಆರ್‌ಪಿಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಲು ಮತ್ತು ಬಂಧಿಸಲು ಒತ್ತಾಯಿಸಿ ಸಂಯುಕ್ತ ಕಿಸಾನ್ ಮೋರ್ಚಾ ಸೋಮವಾರ ಕರೆ ನೀಡಿದ್ದ ಆರು ಗಂಟೆಗಳ 'ರೈಲ್ ರೋಕೋ' ಪ್ರತಿಭಟನೆಯ ಭಾಗವಾಗಿ ಹರ್ಯಾಣ ಹಾಗೂ ದೇಶದ ಕೆಲವು ಭಾಗಗಳ ರೈತರು ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದರು. .

ಪಂಜಾಬ್ ಹಾಗೂ ಹರ್ಯಾಣ ಎರಡೂ ರಾಜ್ಯಗಳಲ್ಲಿ ರೈಲುಗಳ ಸಂಚಾರವನ್ನು ಅಡ್ಡಿಪಡಿಸಿದ್ದು, ಪ್ರಯಾಣಿಕರು ತಮ್ಮ ಬ್ಯಾಗೇಜ್‌ನೊಂದಿಗೆ ಗಂಟೆಗಟ್ಟಲೆ ನಿಲ್ದಾಣಗಳಲ್ಲಿ ಕಾದು  ತೊಂದರೆಗೊಳಗಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News