×
Ad

ಮಹಾರಾಷ್ಟ್ರ: ಅ. 22ರಂದು ಸಿನೆಮಾ ಮಂದಿರ ಆರಂಭ

Update: 2021-10-19 22:48 IST

ಮುಂಬೈ, ಅ. 19: ಅಕ್ಟೋಬರ್ 22ರಿಂದ ಅಮ್ಯೂಸ್ಮೆಂಟ್ ಪಾರ್ಕ್ಗಳು, ಸಿನೆಮಾ ಮಂದಿರಗಳು ಹಾಗೂ ರಂಗಮಂದಿರಗಳನ್ನು ತೆರೆಯಲು ಮಹಾರಾಷ್ಟ್ರ ಸರಕಾರ ಮಂಗಳವಾರ ಅನುಮತಿ ನೀಡಿದೆ. ಎಲ್ಲ ರೆಸ್ಟೋರೆಂಟ್ಗಳು ಹಾಗೂ ತಿನಿಸು ಅಂಗಡಿಗಳು ಮಧ್ಯರಾತ್ರಿ ವರೆಗೆ ಕಾರ್ಯಾಚರಿಸುವಂತೆ ಕೂಡ ಸರಕಾರ ಅನುಮತಿ ನೀಡಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಮಂಗಳವಾರ ತಿಳಿಸಿದ್ದಾರೆ. 

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಕೋವಿಡ್ ಕಾರ್ಯಪಡೆಯೊಂದಿಗೆ ಸಭೆ ನಡೆದ ಬಳಿಕ ಹಾಗೂ ಅವರು ರೆಸ್ಟಾರೆಂಟ್, ಅಂಗಡಿಗಳ ಕಾರ್ಯಾಚರಣೆ ಅವಧಿ ವಿಸ್ತರಿಸಲು ಮಾರ್ಗಸೂಚಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ ಒಂದು ದಿನದ ಬಳಿಕ ಈ ಅಧಿಸೂಚನೆ ಹೊರಬಿದ್ದಿದೆ. ‘‘ರಾಜ್ಯ ಸರಕಾರ ಎಲ್ಲ ರೆಸ್ಟೋರೆಂಟ್ಗಳು ಹಾಗೂ ತಿನಿಸಿನ ಅಂಗಡಿಗಳು ರಾತ್ರಿ 12 ವರೆಗೆ ಕಾರ್ಯಾಚರಿಸಲು ಅವಕಾಶ ನೀಡಿದೆ. ಉಳಿದ ಎಲ್ಲ ಸಂಸ್ಥೆಗಳಿಗೆ ರಾತ್ರಿ 11 ಗಂಟೆ ವರೆಗೆ ಕಾರ್ಯಾಚರಿಸಲು ಅನುಮತಿ ನೀಡಿದೆ.’’ ಎಂದು ಅಧಿಸೂಚನೆ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News