ಟ್ವೆಂಟಿ-20 ವಿಶ್ವಕಪ್ :ಬಾಂಗ್ಲಾದೇಶಕ್ಕೆ ಶರಣಾದ ಒಮಾನ್

Update: 2021-10-19 18:18 GMT
photo:twitter/@ESPNcricinfo

ಅಲ್-ಅಮೀರಾತ್, ಅ.19: ಆರಂಭಿಕ ಬ್ಯಾಟ್ಸ್ ಮನ್  ಜತಿಂದರ್ ಸಿಂಗ್(40, 33 ಎಸೆತ)ಏಕಾಂಗಿ ಹೋರಾಟದ ಹೊರತಾಗಿಯೂ ಒಮಾನ್ ತಂಡ ಬಾಂಗ್ಲಾದೇಶ ವಿರುದ್ಧದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಮೊದಲ ಸುತ್ತಿನ ಬಿ ಗುಂಪಿನ ಆರನೇ ಪಂದ್ಯದಲ್ಲಿ 26 ರನ್ ಗಳ ಅಂತರದಿಂದ ಸೋಲುಂಡಿದೆ.

ಗೆಲ್ಲಲು 154 ರನ್ ಗುರಿ ಪಡೆದಿದ್ದ ಒಮಾನ್ ತಂಡವು 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಕಶ್ಯಪ್ ಪ್ರಜಾಪತಿ(21) ಝೀಶನ್ ಮಕ್ಸೂದ್( 12) ಹಾಗೂ ಮುಹಮ್ಮದ್ ನದೀಮ್(ಔಟಾಗದೆ 14) ಎರಡಂಕೆಯ ಸ್ಕೋರ್ ಗಳಿಸಿದರು.

ಬಾಂಗ್ಲಾದೇಶದ ಬೌಲಿಂಗ್ ವಿಭಾಗದಲ್ಲಿ ಮುಸ್ತಫಿಝುರ್ರಹ್ಮಾನ್(4-24) ಯಶಸ್ವಿ ಬೌಲರ್ ಎನಿಸಿಕೊಂಡರು. ಆಲ್ ರೌಂಡರ್ ಶಾಕಿಬ್ ಅಲ್ ಹಸನ್(3-28)ಮೂರು ವಿಕೆಟ್ ಗಳನ್ನು ಪಡೆದು ಮಿಂಚಿದರು.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ ನಿಗದಿತ 20 ಓವರ್ ಗಳಲ್ಲಿ 153 ರನ್ ಗಳಿಸಿ ಆಲೌಟಾಗಿತ್ತು. ಒಮಾನ್ ಪರವಾಗಿ ಬಿಲಾಲ್ ಖಾನ್(3-18), ಫಯಾಝ್ ಬಟ್(3-30) ತಲಾ 3 ವಿಕೆಟ್ ಪಡೆದಿದ್ದರು. ಕಲೀಮುಲ್ಲಾ(2-30) ಎರಡು ವಿಕೆಟ್ ಪಡೆದಿದ್ದರು. ಬಾಂಗ್ಲಾದ ಪರವಾಗಿ ಮುಹಮ್ಮದ್ ನಯೀಮ್  ಗರಿಷ್ಟ ಸ್ಕೋರ್(64) ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News