‘ಬ್ರೇಕ್‍ತ್ರೂ’ ಅರ್ಜಿ ಆಹ್ವಾನ

Update: 2021-10-19 18:17 GMT

ಬೆಂಗಳೂರು, ಅ.19: ‘ದಿ ಬ್ರಿಟೀಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಶನ್ ಆಟ್ರ್ಸ್’(ಬಾಫ್ಟ) ದತ್ತಿಯ ವತಿಯಿಂದ ‘ನೆಟ್‍ಫ್ಲಿಕ್ಸ್’ನ ಸಹಯೋಗದೊಂದಿಗೆ ಭಾರತದ ಸಿನಿಮಾ, ಗೇಮ್ಸ್ ಹಾಗೂ ದೂರದರ್ಶನದಲ್ಲಿ ಸೃಜನಶೀಲ ಪ್ರತಿಭೆಯುಳ್ಳವರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿ, ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎರಡನೇ ಬಾರಿಗೆ ‘ಬ್ರೇಕ್‍ತ್ರೂ’ ಕಮ್ಮಟಕ್ಕೆ ಅರ್ಜಿ ಆಹ್ವಾನಿಸಿದೆ. 

ಬಾಫ್ಟ ಬ್ರೇಕ್‍ತ್ರೂ ಕಮ್ಮಟಕ್ಕೆ ಎ.ಆರ್.ರೆಹಮಾನ್ ರಾಯಭಾರಿ ಆಗಿ ಆಯ್ಕೆಯಾಗಿದ್ದಾರೆ. ಭಾರತದ ಪ್ರತಿಭೆಗಳಿಗೆ ಈ ವಲಯದಲ್ಲಿ ಜ್ಞಾನ ಹಾಗೂ ಕುಶಲತೆಯನ್ನು ಆಭಿವೃದ್ಧಿಗೊಳಿಸುವುದು, ಪ್ರಗತಿಗೆ ಅಡಚಣೆಯನ್ನು ಪರಿಹರಿಸಿಕೊಳ್ಳುವುದು ಮತ್ತು ವೃತ್ತಿ ಜೀವನದ ಮೇಲೆ ಪ್ರಭಾವ ಬೀರುವ ಜನರೊಂದಿಗೆ ಜಾಗತಿಕವಾಗಿ ಸಂಪರ್ಕ ಬೆಳೆಸಿಕೊಳ್ಳುವಂತೆ ಮಾಡುವುದು ಕಮ್ಮಟದ ಉದ್ದೇಶವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟವರಾಗಿದ್ದು, ಕನಿಷ್ಠ 2 ವರ್ಷ ಭಾರತದಲ್ಲಿ ನೆಲೆಸಿರಬೇಕು ಹಾಗೂ ಇಂಗ್ಲಿಷ್ ಸುಗಮವಾಗಿ ಬರಬೇಕು. ಅರ್ಹ ಅಭ್ಯರ್ಥಿಗಳು ಜಾಲತಾಣ www.bafta.org/supporting-talent/breakthrough  ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News