"ರಾತ್ರಿ 1ರ ತನಕ ವರದಿಗಾಗಿ ಕಾದಿದ್ದೆವು": ಲಖಿಂಪುರ ಪ್ರಕರಣದ ಕುರಿತು ಉ.ಪ್ರ ಸರಕಾರಕ್ಕೆ ಸುಪ್ರೀಂಕೋರ್ಟ್‌ ತರಾಟೆ

Update: 2021-10-20 18:17 GMT


  ಹೊಸದಿಲ್ಲಿ,ಆ.21: ಅಕ್ಟೋಬರ್ 3ರಂದು ಲಖೀಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸುವ ವಿಚಾರದಲ್ಲಿ ಉತ್ತರ ಪ್ರದೇಶ ಸರಕಾರವು ವಿಳಂಬನೀತಿಯನ್ನು ಅನುಸರಿಸುತ್ತಿದಯೆಂದು ಸುಪ್ರೀಂಕೋರ್ಟ್ ಬುಧವಾರ ಅಭಿಪ್ರಾಯಿಸಿರುವುದಾಗಿ ಬಾರ್ ಆ್ಯಂಡ್ ಬೆಂಚ್ ಕಾನೂನು ಸುದ್ದಿಜಾಲ ತಾಣ ವರದಿ ಮಾಡಿದೆ.

ಬುಧವಾರ ಉತ್ತರಪ್ರದೇಶ ಸರಕಾರದ ಪರವಾಗಿ ವಾದ ಮಂಡಿಸಿದ ವಕೀಲ ಹರೀಶ್ ಸಾಳ್ವೆ ಅವರು ಲಖೀಂಪುರ ಹಿಂಸಾಚಾರದ ಕುರಿತಾದ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ತಾನು ನ್ಯಾಯಾಲಯಕ್ಕೆ ಸಲ್ಲಿಸಿರುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಹಾಗೂ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಸೂರ್ಯ ಕಾಂತ್ ಅವರಿದ್ದ ನ್ಯಾಯಪೀಠಕ್ಕೆ ತಿಳಿಸಿದರು.

ಆದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ರಮಣ ಅವರು, ನ್ಯಾಯಪೀಠಕ್ಕೆ ಈಗ ತಾನೆಯಷ್ಟೇ ಈ ವರದಿ ದೊರೆತಿದೆ ಎಂದರು. ‘‘ ವರದಿಯ ಸಲ್ಲಿಕೆಗೆಗಾಗಿ ನಾವು ಮಂಗಳವಾರ ರಾತ್ರಿ 1 ಗಂಟೆಯವರೆಗೂ ಕಾಯುತ್ತಲೇ ಇದ್ದೆವು. ಆದರೆ ನಮಗೆ ಏನೂ ದೊರೆತಿರಲಿಲ್ಲ’’ ಎಂದು ರಮಣ ಅಸಮಾಧಾನ ವ್ಯಕ್ತಪಡಿಸಿದರು.

ಲಖೀಂಪುರ ಹಿಂಸಾಚಾರ ಘಟನೆಯ 44 ಸಾಕ್ಷಿಗಳ ಪೈಕಿ ಕೇವಲ ನಾಲ್ವರ ಹೇಳಿಕೆಗಳನ್ನು ಮಾತ್ರವೇ ಯಾಕೆ ದಾಖಲಿಸಿಕೊಳ್ಳಲಾಗಿದೆ ಎಂದು ನ್ಯಾಯಾಲಯ ಪ್ರಶ್ನಿಸಿತು. ನ್ಯಾಯಾಂಗ ಕಸ್ಟಡಿಯಲ್ಲಿರುವ ಆರು ಮಂದಿ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಯಾಕೆ ಪ್ರಾಸಿಕ್ಯೂಶನ್ ನ್ಯಾಯಾಲಯವನ್ನು ಕೋರುತ್ತಿಲ್ಲವೆಂಬುದನ್ನು ಕೂಡಾ ಅದು ತಿಳಿಯಬಯಸಿತು.

ಲಖೀಂಪುರ ಹಿಂಸಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು, ದುರ್ಬಲ ಸಾಕ್ಷಿದಾರರಿಗೆ ರಕ್ಷಣೆಯನ್ನು ಒದಗಿಸಬೇಕೆಂದು ನ್ಯಾಯಾಲಯ ಅಭಿಪ್ರಾಯಿಸಿತು.

ಅಕ್ಟೋಬರ್ 3ರಂದು ಲಖೀಂಪುರದಲ್ಲಿ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆಯ ಸಂದರ್ಭನಡೆದ ಹಿಂಸಾಚಾರದ ಘಟನೆಗಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿದ್ದರು.


ಅದಕ್ಕೆ ಉತ್ತರಿಸಿದ ಸಾಳ್ವೆ ಅವರು ದಸರಾ ರಜೆಗಳ ಹಿನನೆಲೆಯಲ್ಲಿ ನ್ಯಾಯಾಲಯಗಳು ಕಾರ್ಯನಿರ್ವಹಿಸದೆ ಇರುವುದರಿಂದ ವರದಿಯನ್ನು ಒಪ್ಪಿಸಲು ತಡವಾಗಿದೆಯೆಂದು ಸಾಳ್ವೆ ಸ್ಪಷ್ಟೀಕರಣ ನೀಡಿದರು. ಆನಂತರ ಸುಪ್ರೀಂಕೋರ್ಟ್ ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 26ಕ್ಕೆ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News